
ಕುಮಟಾ: ಹೆಸ್ಕಾಂ ಕುಮಟಾ ಉಪವಿಭಾಗದಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಏರ್ಪಡಿಸಲಾಗುವ ವಿದ್ಯುತ್ ಅದಾಲತ್ ಹಾಗೂ ಗ್ರಾಹಕ ಸಂವಾದ ಸಭೆಯನ್ನು ಜು.17 ಶನಿವಾರ ಆಯೋಜಿಸಲಾಗಿದೆ.
ಮುಂಜಾನೆ 11 ರಿಂದ ಮಧ್ಯಾಹ್ನ 1:30 ಗಂಟೆಯ ವರೆಗೆ ಗ್ರಾಹಕ ಸಂವಾದ ಸಭೆಯನ್ನು ಹಾಗು ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ವಿದ್ಯುತ್ ಅದಾಲತ್ ಸಭೆಯನ್ನು ಕುಮಟಾ ಹೆಸ್ಕಾಂ ಕಚೇರಿ ಆವರಣದಲ್ಲಿ ನಡೆಯಲಿದೆ. ಕುಮಟಾ ವಿಭಾಗದ ಗ್ರಾಹಕರು ಹಾಜರಾಗಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡು ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚಸಿ ಇಲಾಖೆಯ ನಿಯಮಾವಳಿ ಅಡಿಯಲ್ಲಿ ಬಗೆಹರಿಸಿಕೊಳ್ಳಬೇಕೆಂದು ಕುಮಟಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಗ್ರಾಹಕರಿಗೆ ಹೆಚ್ಚಿನ ಬೇಕಾದಲ್ಲಿ ಕಚೇರಿ ವೇಳೆಯಲ್ಲಿ 08386-(222165/222034/224865) ದೂರವಾಣಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.