• first
    second
    third
    previous arrow
    next arrow
  • ಪ್ರಭಾತನಗರ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ

    300x250 AD

    ಹೊನ್ನಾವರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಶುಕ್ರವಾರ ಪಟ್ಟಣದ ಪ್ರಭಾತನಗರ ಅಂಗನವಾಡಿಯಲ್ಲಿ ನಡೆಯಿತು.

    ಗರ್ಭಿಣಿಯರು ಮತ್ತು ಮಕ್ಕಳಿಗೆ ಆರೋಗ್ಯಕ್ಕೆ ಸಹಕಾರಿಯಾದ ಆಹಾರವನ್ನು ಒದಗಿಸಿ ಮಾಹಿತಿ ನೀಡಲಾಯಿತು.

    ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಮೇಧಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಿರಿಧಾನ್ಯ ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುತ್ತಿದೆ. ಪಾಲಕರು ತಾತ್ಸಾರ ಮಾಡದೇ ಮುಖ್ಯ ಆಹಾರವನ್ನು ನೀಡಿ ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕು. ಪ್ರಭಾತನಗರ ಅಂಗನವಾಡಿಯು ಮಕ್ಕಳ ಅಭಿವೃದ್ಧಿಗೆ ಶ್ರಮಿಸುವಲ್ಲಿ ಮುಂಚೂಣಿಯಲ್ಲಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    300x250 AD

    ಗರ್ಭಿಣಿ ನೇತ್ರಾವತಿ ಮೇಸ್ತ ಅವರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಬಾಲಕಿ ವಿಸ್ಮಯಾ ಇವಳಿಗೆ ಅನ್ನಪ್ರಾಶನ ನಡೆಸಲಾಯಿತು. ಬಾಲಕಿ ಅಲ್ಪಿಯಾ ಫನಾರ್ಂಡಿಸ್ ಳ ಹುಟ್ಟುಹಬ್ಬ ಆಚರಿಸಲಾಯಿತು.

    ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ನಾಯ್ಕ, ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ನಾಯ್ಕ, ಸಹಾಯಕಿ ನೇತ್ರಾವತಿ ಹರಿಜನ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Back to top