ಕುಮಟಾ: ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಹಾಗೂ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ನಳೀನಾ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮಟಾ ರೋಟರೆಕ್ಟ್ ಅಧ್ಯಕ್ಷೆ ಹಾಗೂ ಸಾಮಾಜಿಕ ಕಳಕಳಿಯ ನಳೀನಾ ಕುಮಟಾ ಪುರಸಭೆ ಗೆ ತೆರಳಿ ಮುಖ್ಯಾಧಿಕಾರಿಯವರನ್ನು ಭೇಟಿ ಆಗಿ ಅಭಿನಂದಿಸಿ ಮಾಸ್ಕ್ ಹಾಗೂ ಡೈರಿ ನೀಡಿದರು ಹಾಗೂ ಪೌರ ಕಾರ್ಮಿಕರು ಪ್ರತಿನಿತ್ಯ ನಗರದ ಹಲವಾರು ಕಡೆ ಓಡಾಡಿ ಸ್ವಚ್ಛತೆ ಹಾಗೂ ಇತರ ಕಾರ್ಯ ಕೊಗೊಳ್ಳುವುದರಿಂದ ಅವರಿಗೆ ಮಾಸ್ಕ್ ವಿತರಿಸಿದರು.
ನಂತರ ಮಾತನಾಡಿದ ನಳೀನಾ ಕುಮಟಾದ ಜನರಿಗೆ ಏನೇ ಸಮಸ್ಯೆ ಆಗಿ ದೂರು ನೀಡಿದರೂ ತಕ್ಷಣಕ್ಕೆ ಸ್ಪಂದಿಸುವ ಮುಖ್ಯಾಧಿಕಾರಿಗಳು ನಗರದ ಅಭಿವೃದ್ಧಿ ಕಾರ್ಯ ನಿರ್ವಹಣೆ , ಕರೋನಾ ನಿರ್ವಹಣೆ, ಸ್ವಚ್ಛತೆ ಕಾರ್ಯ ದ ನಿರ್ವಹಣೆ, ಮೂಲಭೂತ ಸೌಕರ್ಯ ದ ಬಗ್ಗೆ ಕಾಳಜಿ ಹೀಗೆ ತಮ್ಮ ಕಾರ್ಯವನ್ನು ನಮ್ಮ ಕುಮಟಾ ಶಾಸಕರ ಮಾರ್ಗದರ್ಶನ, ಸಹಕಾರ ಪಡೆದು, ಎಲ್ಲ ಸದಸ್ಯರ ಸಲಹೆ ಸಹಕಾರ ಪಡೆದು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ಸ್ವಚ್ಛತೆಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಎರಡು ಪ್ರಶಸ್ತಿಗಳು ಕುಮಟಾಕ್ಕೆ ಸಂದಿದೆ ಹಾಗಾಗಿ ಅವರನ್ನು ಅಭಿನಂದಿಸಿದ್ದೇನೆ ಮತ್ತು ಪೌರಕಾರ್ಮಿಕರೂ ಸಹ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ಸ್ಥಳೀಯ ಶಾಸಕರ ಸಲಹೆ ಸಹಕಾರ, ಎಲ್ಲ ಸದಸ್ಯರ ಮತ್ತು ಮುಖ್ಯವಾಗಿ ಕುಮಟಾ ನಾಗರಿಕರ ಸಹಕಾರ ದೊಂದಿಗೆ ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಅಷ್ಟೇ.ಅನೇಕ ನ್ಯೂನ್ಯತೆಗಳೂ ಆಗಿರಬಹುದು ಅದು ಪ್ರತಿಯೊಬ್ಬನ ಕೆಲಸ ಕಾರ್ಯದಲ್ಲಿ ಇದ್ದೇ ಇರುತ್ತದೆ.
ಫೆ 8 ರಂದು ಕುಮಟಾ ಜಾತ್ರೆ ಸಾಂಕೇತಿಕವಾಗಿ ನಡೆಯುತ್ತಿರುವುದರಿಂದ ಭಕ್ತರು ಸರ್ಕಾರ ಕೊವಿಡ್ ನಿಯಮ ಪಾಲನೆ ಮಾಡಲೇಬೇಕು ಮಾಸ್ಕ್ ಧರಿಸಿ ಓಡಾಡಬೇಕು ತಪ್ಪಿದಲ್ಲಿ ಪುರಸಭೆ ಮತ್ತು ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಗುವುದು ಎಂದರು.