ಕಾರವಾರ: ಸಹಕಾರ ಸಂಘಗಳು ಅಥವಾ ಸೌಹಾರ್ದ ಸಹಕಾರಿಗಳು 2021-22ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ನೇಮಕಾತಿ ಪತ್ರಗಳನ್ನು ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ 2021 ಡಿಸೆಂಬರ್ ತಿಂಗಳಾಂತ್ಯಕ್ಕೆ ವಾರ್ಷಿಕ ಮಹಾಸಭೆ ಮುಕ್ತಾಯಗೊಳಿಸಿದ ಸಹಕಾರ ಸಂಘಗಳು ಅಥವಾ ಸೌಹಾರ್ದ ಸಹಕಾರಿಗಳು ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ನೇಮಕಾತಿ ಪತ್ರಗಳನ್ನು ಸಲ್ಲಿಸಬೇಕು. ಇದಕ್ಕೆ ತಪ್ಪಿದಲ್ಲಿ ಇಲಾಖೆಯಿಂದಲೇ ಲೆಕ್ಕಪರಿಶೋಧಕರನ್ನು ನೇಮಕ ಮಾಡುವ ಬಗ್ಗೆ ಕ್ರಮವಿಡಲಾಗುವುದು ಎಂದು ಕಾರವಾರ ಲೆಕ್ಕಪರಿಶೋಧನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಮ್ ಎ ಸೈಯದ್ ತಿಳಿಸಿದ್ದಾರೆ.