
ಶಿರಸಿ: ಪ್ರತಿಷ್ಟಿತ ಯಮಹಾ ಕಂಪನಿಯ ನೂತನ ಬೈಕ್ FZ-X ಅನ್ನು ಶುಕ್ರವಾರ ಯಮಹಾ ಕಂಪನಿಯ ಉತ್ತರ ಕನ್ನಡ ಮೇನ್ ಡೀಲರ್ ಆಗಿರುವ ಶಿರಸಿಯ ‘ಹೆಗಡೆ ಏಜೆನ್ಸೀಸ್’ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಶಿರಸಿ ಮುಖ್ಯಕಛೇರಿಯ ಸೀನಿಯರ್ ಮ್ಯಾನೆಜರ್ ಚಂದನ್ ಜಿ ಎಸ್ ಉದ್ಘಾಟನೆಗೊಳಿಸಿದರು.
ನೂತನ ಬೈಕ್ ನ ಚಾವಿ ಗ್ರಾಹಕರಿಗೆ ಸಾಂಕೇತಿಕವಾಗಿ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯಮಹಾ ಕಂಪನಿಯ ಬೈಕ್ ಬಹುತೇಕ ಗ್ರಾಹಕರ ಅಚ್ಚುಮೆಚ್ಚಿನ ಬೈಕ್ ಆಗಿದೆ. ಸವಾರರು ವಾಹನ ಚಲಾಯಿಸುವಾಗ ರಸ್ತೆ ಸುರಕ್ಷತಾ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದರು.
ಈಗಾಗಲೇ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ, ಬ್ಯಾಂಕ್ ಹೊಸದೊಂದು ಯೋಜನೆಯನ್ನು ಜಾರಿಗೊಳಿಸಿದ್ದು, ‘ಈಸಿ ರೈಡ್’ ಎನ್ನುವ ಯೋಜನೆಯ ಮೂಲಕ ಪ್ರೀ ಅಪ್ರೂವ್ಡ್ ಲೋನ್ ಮುಖಾಂತರ 3 ಅಂದಾಜು ಘಂಟೆ ಸಮಯದ ಒಳಗಾಗಿ 10.5 % ಬಡ್ಡಿದರದಲ್ಲಿ ಲೋನ್ ದೊರಕುತ್ತದೆ. ಹಾಗಾಗಿ ಗ್ರಾಹಕರು ಈ ಯೋಜನೆಯನ್ನು ಹೆಚ್ಚು ಬಳಸಿಕೊಳ್ಳಬೇಕಾಗಿ ಅವರು ವಿನಂತಿಸಿಕೊಂಡರು.
ಕಂಪನಿಯ ಉತ್ತರ ಕನ್ನಡ ಜಿಲ್ಲಾ ಮೇನ್ ಡೀಲರ್ ಹೆಗಡೆ ಏಜನ್ಸೀಸ್ ಮಾಲೀಕರಾದ ಶ್ರೀಪಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಜಪಾನ್ ಮೂಲದ ಯಮಹಾ ಬೈಕ್ ಕಂಪನಿಯು ಕಳೆದ 67 ವರ್ಷಗಳಿಂದ ಜಗತ್ತಿನಾದ್ಯಂತ ತನ್ನ ಸೇವೆಯನ್ನು ನೀಡುತ್ತಿದೆ. ಭಾರತಕ್ಕೆ ಬಂದ ಸಮಯದಿಂದ ಆರಂಭಗೊಂಡು ಈ ವರೆಗೆ ವಿವಿಧ ತರಹದ ಮೊಡೆಲ್ ಬೈಕ್ ಗಳು ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಗೆ ಬಂದಿದೆ. ಇಂದು ಶುಭಾರಂಭಗೊಂಡಿರುವ FZ-X ಬೈಕ್ ಸಹ ಅತ್ಯುತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಮ್ಯಾಟ್ ಕಾಫರ್, ಮೆಟಾಲಿಕ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು.
FZ-X ಬೈಕ್ ನ ಶಿರಸಿ ಭಾಗದ ಮೊದಲ ಗ್ರಾಹಕರಾದ ತಾಲೂಕಿನ ಸಂಪಖಂಡದ ರೋಹಿತ್ ವಿಕ್ರಮ್ ಹೆಗಡೆಗೆ ನೂತನ ಬೈಕ್ ಹಸ್ತಾಂತರಿಸಲಾಯಿತು.
ಈ ವೇಳೆ ಎಸ್ಬಿಐ ಮುಖ್ಯ ಕಛೇರಿಯ ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್, ಮೇನ್ ಸೇಲ್ಸ್ ಆಫೀಸರ್, ಹೆಗಡೆ ಏಜನ್ಸೀಸ್ ಶೌರೂಮ್ ನ ಅಕ್ಷಯ ಹೆಗಡೆ, ದಿವ್ಯಾ ಹೆಗಡೆ, ವೀಣಾ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮವನ್ನು ಕೊವಿಡ್ ನಿಯಮಾನುಸಾರ ನಡೆಸಲಾಗಿತ್ತು.