ಶಿರಸಿ: ಕೆರೆಗುಂಡಿ ಮಾಸ್ತ್ಯೆಮ್ಮಾ ದೇವಿ ಹಾಗೂ ಪರಿವಾರ ದೇವರುಗಳ 7ನೇ ವರ್ಧಂತಿ ಉತ್ಸವ ಫೆ. 7 ರ ಸೋಮವಾರ ರಥಸಪ್ತಮಿಯಂದು ಕೋವಿಡ್ – 19 ಮಾರ್ಗಸೂಚಿಯಂತೆ ಅತ್ಯಂತ ಸರಳವಾಗಿ ನೆರವೇರಲಿದೆ.
ಬೆಳಿಗ್ಗೆ 8.00 ರಿಂದ ಸರ್ವಾಭಿಷೇಕ, ಸರ್ವಾಲಂಕಾರ ಪೂಜೆ ನಂತರ ಸಾಮೂಹಿಕ ಶ್ರೀದೇವಿ ಪಾರಾಯಣ, ಹೋಮ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಂತರ ಪ್ರಸಾದ ವಿತರಣೆ ಮಹಾಮಂಗಳಾರತಿ ನಡೆಯಲಿದೆ.
ಎಲ್ಲಾ ಭಕ್ತಾದಿಗಳು ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಣೆ ತಿಳಿಸಿದೆ.