ಶಿರಸಿ: ಆರೋಗ್ಯ ಭಾರತಿ ,ವಿವಿಧ ಸಂಘ ಸಂಸ್ಥೆ ಹಾಗೂ ಯೋಗ ಕೇಂದ್ರಗಳ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಫೆ. 7 ರಂದು ರಥಸಪ್ತಮಿ ಪ್ರಯುಕ್ತ ಸೂರ್ಯನಮಸ್ಕಾರ ಯಜ್ಞವನ್ನು ಉತ್ತರ ಕನ್ನಡದ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಸೂರ್ಯನಮಸ್ಕಾರ ಯಜ್ಞನಡೆಯುವ ಸ್ಥಳಗಳು:
ಶಿರಸಿಯ ರಾಘವೇಂದ್ರ ಮಠ – ಪ್ರಾತಃಕಾಲ 5.30 ರಿಂದ 7 ಗಂಟೆಯವರೆಗೆ ಭಟ್ಕಳ ಚನ್ನಪಟ್ಟಣದ ಆಂಜನೇಯ ದೇವಸ್ಥಾನದ ಆವರಣ -ಪ್ರಾತಃಕಾಲ 5.30 ರಿಂದ 7:00 ರವರಿಗೆ
ಶಿರಾಲಿ ಜನತಾ ವಿದ್ಯಾಲಯ ಮೈದಾನ – ಪ್ರಾತಃಕಾಲ 5 30 ರಿಂದ 7:00 ರವರಿಗೆ.
ಮುರುಡೇಶ್ವರ ಬಸ್ತಿ – ಪ್ರಾತಃಕಾಲ 5.30 ರಿಂದ 7 ಗಂಟೆಯವರೆಗೆ.
ಹೊನ್ನಾವರ ಬೀಚ್- ಬೆಳಿಗ್ಗೆ 6 ರಿಂದ 7 ರವರೆಗೆ.
ಕಾರವಾರ ಸ್ಥಳ ರವೀಂದ್ರನಾಥ ಟ್ಯಾಗೋರ್ ಬೀಚ್ – ಬೆಳಿಗ್ಗೆ 6 ರಿಂದ 7:00 ರವರಿಗೆ.
ಮುಂಡಗೋಡ್ ಇಂದೋರ್ ನ ಸರ್ಕಾರಿ ಪ್ರೌಢಶಾಲೆ ಆವರಣ -ಬೆಳಿಗ್ಗೆ 7 ರಿಂದ 8:00 ಗಂಟೆಯವರೆಗೆ.
ದಾಂಡೇಲಿ ಯಲ್ಲಿ ಫೆ.6 ರಂದು ವನವಾಸಿ ಕಲ್ಯಾಣ ಆಶ್ರಮದ ರುಕ್ಮಿಣಿ ಬಾಲಿಕಾ ವಿದ್ಯಾರ್ಥಿ ನಿಲಯ – ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ.
ಈ ಮೇಲೆ ನಡೆಯುವಂತಹ ಎಲ್ಲಾ ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮದಲ್ಲಿ ಭಾರತಮಾತೆಯ ಸುಪುತ್ರರು, ಮಾತಾ, ಭಗಿನಿಯರು ಪಾಲ್ಗೊಂಡು ಭಾರತಮಾತೆಗೆ 75 ಕೋಟಿ ಸೂರ್ಯನಮಸ್ಕಾರದ ಸಮರ್ಪಣಾ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಂಡು ಸಹಕರಿಸಿ ಯಶಸ್ವಿಗೊಳಿಸಬೇಕೆಂದು ಶಿರಸಿಯ ಆರೋಗ್ಯ ಭಾರತಿ ವಿಭಾಗದ ಸಹ ಸಂಯೋಜಕರಾದ ನಾಗೇಶ್ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.