ಶಿರಸಿ: ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಕರುನಾಡಕೆರೆಯಾತ್ರೆ ಶೀರ್ಷಿಕೆಯಡಿಯಲ್ಲಿ ಜಲ ಸಾಕ್ಷರತೆಯ ಕುರಿತಾಗಿ ಇಂದು ಸಾಯಂಕಾಲ 7 ರಿಂದ 8.30 ರ ವರೆಗೆ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದಾರೆ.
ಕೆರೆಗಳು ನಮ್ಮ ಜನಜೀವನ ಮತ್ತು ಸಂಸ್ಕೃತಿಯ ಭಾಗ. ಕೃಷಿ ಜೀವನ, ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಇವುಗಳ ಪಾತ್ರ ಅಗಾಧ. ಜನಶಕ್ತಿಯಿಂದ ಸಹಸ್ರಾರು ವರ್ಷಗಳ ಹಿಂದೆ ನಿರ್ಮಿಸಿದ ಅಪರೂಪದ ಜನನಿಧಿಗಳು ಈ ಕೆರೆಗಳು, ಕೆರೆ ನಿರ್ಮಾಣ, ನಿರ್ವಹ ಎಯ ಹಿಂದಿನ ಐತಿಹಾಸಿಕ ನೋಟದಲ್ಲಿ ಮನುಕುಲ ಎಂದೂ ಮರೆಯಲಾಗದ ಚರಿತ್ರೆಯಿದೆ. ಕರುನಾಡ ಕೆರೆ ಯಾತ್ರೆ ಜಲ ಸಾಕ್ಷರತೆಯ ಒಂದು ಗಂಭೀರ ಪ್ರಯತ್ನ. ಕೆರೆಯ ಹೂಳಿಗಿಂತ ತಲೆಯ ಹೂಳನ್ನು ತೆಗೆಯುವ ಕೆಲಸ ಆಗಬೇಕಿದೆ. ಈ ಮಹತ್ವದ ವಿಷಯ ಕುರಿತು ಅರಿವಿನ ಉಪನ್ಯಾಸ ದೊರೆಯಲಿದೆ.
ಕೆರೆಗಳ ಮಹತ್ವ ಅರಿಯುವ ದೃಷ್ಟಿಯಿಂದ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.