ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನದಲ್ಲಿ ತಾಲೂಕು ಕನ್ನಡ ವೈಶ್ಯ ಸಮಾಜದ ವಾರ್ಷಿಕ ಕಾರ್ಯಕ್ರಮ ನಡೆಯಿತು.
ಜ್ಯೋತಿಷಿ ಪ.ಗ.ಭಟ್ಟ ಗುಡ್ಡೆ ಮಾರ್ಗದರ್ಶನದಲ್ಲಿ ವಿವಿಧ ಪೂಜೆ,ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗಾವಿ ಕನ್ನಡ ವೈಶ್ಯ ಸಮಾಜ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಕೃಷ್ಣಾನಂದ ವಿ.ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿ,ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
ಕನ್ನಡ ವೈಶ್ಯ ಸಮಾಜದ ತಾಲೂಕು ಗೌರವಾಧ್ಯಕ್ಷ ಶ್ರೀಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಕೆಎಲ್ಇ ಟೆಕ್ನೋಲಜಿ ಸಂಸ್ಥೆಯ ಡಾ.ನಾಗರಾಜ ಪುಂಡಲೀಕ ಶೆಟ್ಟಿ, ಶಿಕ್ಷಕ ಸಂತೋಷ ಶೆಟ್ಟಿ, ಅನಿಲಕುಮಾರ ಶೆಟ್ಟಿ, ಶೋಭಾ ಶೆಟ್ಟಿ ಇತರರಿದ್ದರು. ಕಾರ್ಯದರ್ಶಿ ಸತೀಶ ಶೆಟ್ಟಿ ನಿರ್ವಹಿಸಿದರು.