ಕಾರವಾರ : ಭಾರತೀಯ ಕೃಷಿ ಸಂಶೋಧನಾ ಪರಿಷತ್ತು- ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ 75 ನೇ ಸಂಸ್ಥಾಪನಾ ದಿನದ ಅಂಗವಾಗಿ ಸಂಸ್ಥೆಯ ಕಾರವಾರ ಪ್ರಾದೇಶಿಕ ಕೇಂದ್ರವು ಕೋಡೇರಿ, ಅಂಕೋಲಾದ ಗಂಗಾವಳಿ, ಹಾರವಾಡ ಮತ್ತು ಕಾರವಾರದಲ್ಲಿ ಸಮಗ್ರ ಬಹು ರೂಪದ ಜಲಕೃಷಿಯ ಪ್ರಾತ್ಯಕ್ಷಿಕೆಗಳನ್ನು ಗುರುವಾರ ಪ್ರಾರಂಭಿಸಿತು.
ಈ ಕೃಷಿ ಪದ್ಧತಿಯು ರೈತರಿಗೆ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಮೀನುಗಳ ಜೊತೆಗೆ ನೀಲಿ ಕಲ್ಲುಗಳ ಹೆಚ್ಚುವರಿ ಬೆಳೆಗಳನ್ನು ಕೊಯ್ಲು ಮಾಡಲಾಗುತ್ತದೆ. ಈ ತಂತ್ರಜ್ಞಾನವು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿದೆ. ಇದನ್ನು ಸಿ.ಎಮ್.ಎಫ್. ಆರ್. ಆಯ್. ಮೂಲಕ ದೇಶದ ವಿವಿಧ ಭಾಗ ಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯು ಮೀನು ಕೃಷಿಕರ ಸಹಭಾಗಿತ್ವದೊಂದಿಗೆ ರಾಜ್ಯದ ಕರಾವಳಿಯಾದ್ಯಂತ ಈ ಕೃಷಿ ಪದ್ಧತಿಯನ್ನು ಜನಪ್ರಿಯ ಗೊಳಿಸಲು ಯೋಜಿಸುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಹಾರವಾಡದಲ್ಲಿ ಗುರುವಾರ ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಾರವಾಡ ಗ್ರಾಮ ಪಂಚಾಯತ ಅಧ್ಯಕ್ಷ ಮಂಜು ಟಾಕೇಕರ ರವರು ಉದ್ಘಾಟಿಸಿದರು. ಇಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಫಲಾನುಭವಿ ಮೀನುಗಾರರು ಕುರುಡಿ ಮತ್ತು ಶಿರಾಳ ಮೀನುಗಳ ಸಮುದ್ರ ಪಂಜರ ಕೃಷಿಯಲ್ಲಿ ತೊಡಗಿದ್ದರು.
ಈ ಸಂದರ್ಭದಲ್ಲಿ ಕಾರವಾರ ಸಿ.ಎಮ್.ಎಫ್. ಆರ್. ಆಯ್. ನ À ಪ್ರಭಾರಿ ವಿಜ್ಞಾನಿ ಡಾ. ಸುರೇಶ ಬಾಬು ಪಿ.ಪಿ. ವಿಜ್ಞಾನಿ ಡಾ. ಅನುರಾಜ್ ಎ. ತಾಂತ್ರಿಕ ಅಧಿಕಾರಿ ಗಳಾದ ನಾರಾಯಣ ಜಿ. ವೈದ್ಯ, ಡಾ. ಪ್ರವೀಣ ಎನ್.ದುಬೆ, ಹರೀಶ ಉಪಸ್ಥಿತರಿದ್ದರು.