ಭಟ್ಕಳ : ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀಧರ ಪದ್ಮಾವತಿದೇವಿಯ ಪಲ್ಲಕ್ಕಿ ಉತ್ಸವ ಫೆ.6 ರ ರವಿವಾರ ದಂದು ನಡಯಲಿದೆ.
ಆ ದಿನ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಪದ್ಮಾವತಿದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ.
ಮೆರವಣಿಗೆ ದೇವಾಲಯದಿಂದ ಹೊರಟು, ರಘುನಾಥರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ಹೋಗಿ ಅಲ್ಲಿಂದ ಹಿಂದಿರುಗಿ, ವೀರವಿಠ್ಠಲ ರಸ್ತೆಯ ಮಾರ್ಗವಾಗಿ ವಡೇರಮಠದ ಮೂಲಕ ನೆಹರುರಸ್ತೆ ಅಲ್ಲಿಂದ ಹೂವಿನ ಚೌಕ, ಮುಖ್ಯರಸ್ತೆಯ ಮೂಲಕ ಮಾರಿಗುಡಿಯ ಬಳಿಯ ಜೈನ ಬಸದಿಯ ಎದುರಿನರಸ್ತೆಯ ಮೂಲಕ ಆಸರಕೇರಿಯನ್ನು ಪ್ರವೇಶಿಸಿ, ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯ ತಲುಪಿ ಅಲ್ಲಿಂದ ಸೊನಾರಕೇರಿಯ ಮೂಲಕ ಶಹರ ಪೋಲೀಶ ಠಾಣೆಯಲ್ಲಿ ಪೂಜೆ ಸ್ವೀಕರಿಸಿ ಮುಖ್ಯರಸ್ತೆಯ ಮೂಲಕ ಹಳೆಬಸ್ ನಿಲ್ದಾಣ ಅಲ್ಲಿಂದ ಕಳಿ ಹನುಮಂತರಸ್ತೆಯ ಮೂಲಕ ದೇವಾಲಯವನ್ನು ತಲುಪಲಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಾಲಯದ ಧರ್ಮದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.