ಕುಮಟಾ: ಪಟ್ಟಣದಲ್ಲಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿದ ಘಟನೆ ಇಂದು ನಡೆದಿದೆ. ಗುಜಿರಗಲ್ಲಿಯ ತುಳಸಿಕಟ್ಟೆಯ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಕಾಣಿಸಿಕೊoಡಿದ್ದು, ಮನೆಯೊಳಗೆ ದಟ್ಟ ಹೊಗೆ ಆವರಿಸಿದೆ. ಬೆಂಕಿ ಬಿದ್ದಿರುವುದನ್ನು ಗಮನಿಸಿದ ಮನೆಯವರು ಕೂಡಲೇ ಮನೆಯಿಂದ ಹೊರಬಂದಿದ್ದು, ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ, ಬೆಂಕಿ ರಭಸಕ್ಕೆ ಮನೆಯೊಳಗಿದ್ದ ಪ್ರಿಜ್, ಟಿ.ವಿ, ಎಲೆಕ್ಟ್ರಿಕಲ್ ಮತ್ತು ಗೃಹಬಳಕೆ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಗೋಪಾಲಕೃಷ್ಣ ಗಂಗೊಳ್ಳಿ ಮಾಲೀಕತ್ವದ ಮನೆಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ.