
ಶಿರಸಿ: ಶ್ರೀ ಲಕ್ಷ್ಮೀ ನರಸಿಂಹ ಶಿಕ್ಷಣ ಸಮಿತಿ ಸಾಲ್ಕಣಿ ನಡೆಸುವ ವೇದ ಪಾಠಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗಿದೆ. ಆಸಕ್ತರು ಕೂಡಲೇ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ಬಂದ 10 ವಿದ್ಯಾರ್ಥಿಗಳಿಗೆ ಉಚಿತ ವಸತಿ ಊಟ ಮತ್ತು ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕೇವಲ ನಾಲ್ಕು ವರ್ಷಗಳಲ್ಲಿ ಕಾಲೋಚಿತ ಮಂತ್ರಗಳು, ಪೂರ್ವಪ್ರಯೋಗ ಹಾಗೂ ಸಂಸ್ಕೃತ ಸಾಹಿತ್ಯ ವರೆಗೆ ಕಲಿಸಲಾಗುವುದು. ಆಸಕ್ತರು ವಿ. ನಾರಾಯಣ ವಿ ಭಟ್ಟ ದೇವತೆಮನೆ,- 9480508217, 08283 200069 ಇವರನ್ನು ಸಂಪರ್ಕಿಸಬಹುದಾಗಿದೆ.