• Slide
    Slide
    Slide
    previous arrow
    next arrow
  • 2022 ವಿಶ್ವವಿದ್ಯಾ ಟ್ರೋಫಿ ಗೆದ್ದ ಹೆಗಡೆ ತಂಡ

    300x250 AD

    ಕುಮಟಾ : ಇತ್ತಿಚೆಗೆ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಯೋಜಿಸಿದ್ದ 2022 ರ ವಿಶ್ವವಿದ್ಯಾ ಟ್ರೋಫಿ ವಾಲಿಬಾಲ್ ಟೂರ್ನಿಯನ್ನು ಪಶು ಸಂಗೋಪನಾ ಸಚಿವ ಪ್ರಭು ಚೌಹ್ಹಾಣ್ ಉದ್ಘಾಟಿಸಿದರು.

    ಪಂದ್ಯಾವಳಿ ಚಾಲನೆ ನೀಡಿ ಮಾತನಾಡಿದ ಸಚಿವರು ದೇಶದ ಸಂಸ್ಕೃತಿ ಅಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಗ್ರಾಮೀಣ ಕ್ರೀಡೆಗಳು ನಮ್ಮ ಜನಜೀವನದ ಅವಿಭಾಜ್ಯ ಅಂಗ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಪ್ರೋತ್ಸಾಹ ಅಗತ್ಯ. ಸಂಸ್ಥೆಗಳು ದೇಶಿ ಕ್ರೀಡೆಗಳ ಬಗ್ಗೆ ವಹಿಸಿರುವ ಆಸಕ್ತಿ ಅನುಕರಣೀಯ ಎಂದು ಅವರು ಅಭಿಪ್ರಾಯಪಟ್ಟರು.

    ಅನೇಕ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪಂದ್ಯಾವಳಿಯು ಅತ್ಯಂತ ತುರುಸಿನಿಂದ ನಡೆಯಿತು ಫೈನಲ್ ಗೆ ಪ್ರವೇಶಿಸಿದ ಉತ್ತಮ ಆಟಗಾರಿಂದ ಕೂಡಿದ್ದ ಹೆಗಡೆಯ ಎ ಮತ್ತು ಬಿ ತಂಡ ಉತ್ತಮ ಆಟ ಪ್ರದರ್ಶಿಸಿ ಎ ತಂಡವು ಚಾಂಪಿಯನ್ ಆಗಿ ವಿಶ್ವವಿದ್ಯಾ-2022 ರ ಟ್ರೊಪಿಯನ್ನು ಮುಡಿಗೇರಿಸಿಕೊಂಡಿತು. ಹೆಗಡೆ ಬಿ ತಂಡವು ರನ್ನರ್ ಅಪ್ ಆಗಿ ಸಂತಸದಿಂದಲೇ ಪ್ರಶಸ್ತಿ ಸ್ವೀಕರಿಸಿತು.

    300x250 AD

    ಫೈನಲ್ ಪಂದ್ಯವನ್ನು ಶ್ರೀಗಳು ಸಂಪೂರ್ಣವಾಗಿ ವೀಕ್ಷಿಸಿ ಹೆಗಡೆ ತಂಡದ ಉತ್ತಮ ಆಟದ ಪ್ರದರ್ಶನ ಕ್ಕೆ ಸಂತಸದಿಂದ ಶುಭಾಶೀರ್ವಾದ ನೀಡಿದರು.

    ಅತ್ಯಂತ ವಿಶೇಷವೆಂದರೆ ಹೆಗಡೆಯ ಎರಡೂ ತಂಡದ ಆಟಗಾರರು ತಾವು ಗೆದ್ದ ಬಹುಮಾನದ ಮೊತ್ತವನ್ನು ತಂಡದ ಸಲಹೆಗಾರ ಹೆಗಡೆಯ ಮೋಹನ ಶಾನಭಾಗ ಹಾಗೂ ಇತರ ವಾಲಿಬಾಲ್ ಪ್ರೇಮಿಗಳ ನಿರ್ದೇಶನದಂತೆ ಮಠದ ಸ್ವಾಮೀಜಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಅರ್ಪಣೆ ಮಾಡಿ ಮಠದ ಕಾರ್ಯಕ್ಕೆ ಕೈಜೋಡಿಸಿದರು

    Share This
    300x250 AD
    300x250 AD
    300x250 AD
    Leaderboard Ad
    Back to top