• Slide
    Slide
    Slide
    previous arrow
    next arrow
  • ಕವಯಿತ್ರಿ ಭಾಗೀರಥಿ ಹೆಗಡೆ ಲಯನ್ಸ ಮಕ್ಕಳೊಂದಿಗೆ ಸಂವಾದ

    300x250 AD

    ಶಿರಸಿ: ಲಯನ್ಸ ಶಾಲೆಯ ಮಕ್ಕಳಿಗೆ ಒಂದು ಅಪರೂಪದ ಕಾರ್ಯಕ್ರಮ. ಅವರು ಓದುವ ಪಠ್ಯದ ಕವಿಗಳೊಂದಿಗೆ ಮುಖಾಮುಖಿ ಸಂವಾದ ನಡೆಸುವ ಅವಕಾಶ. ಕವನ ರಚಿಸುವ ಹಂಬಲದ ಮುದ್ದು ಮಕ್ಕಳ ಗೊಂದಲಗಳಿಗೆ ಉತ್ತರ ಸಿಕ್ಕಿದ ಸಂಭ್ರಮ. ತಮ್ಮ ಪಠ್ಯದಲ್ಲಿನ ಕವಿಗಳನ್ನು ಕಂಡು ವಿದ್ಯಾರ್ಥಿಗಳು ಪುಳಕಿತರಾದರು.

    ಶಿರಸಿ ಲಯನ್ಸ ಶಾಲೆಯ ವಾರಾಂತ್ಯದ ಅಂತರ್ಜಾಲ ಸಂಚಿಕೆ ಲೋಚನ ಕಾರ್ಯಕ್ರಮದ ಅತಿಥಿಗಳಾಗಿ ನಾಡಿನ ಪ್ರಖ್ಯಾತ ಹಿರಿಯ ಕವಯಿತ್ರಿ ಭಾಗೀರಥಿ ಹೆಗಡೆ ಮಕ್ಕಳೊಡನೆ ಸಂವಾದ ನಡೆಸಿ ಸದಾ ಪ್ರಯತ್ನಶಾಲಿಗಳಾಗಿ, ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದರು.

    ಇವರದೇ ರಚನೆಯ ಕನ್ನಡಮ್ಮ ಕವನವನ್ನು ವಿದ್ಯಾರ್ಥಿಗಳು ರಾಗಬದ್ದವಾಗಿ ಹಾಡಿದರು. ಕನ್ನಡಮ್ಮ ಕವನ ರಚನೆಯ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸುತ್ತಾ ತಮ್ಮ ಕವನ ರಚನೆಯ ಸ್ಪೂರ್ತಿಯಾದ ತಾಯಿ ಗಣಪಿ ಹೆಗಡೆಯವರನ್ನು ಭಾಗೀರಥಿ ಹೆಗಡೆಯವರು ಸ್ಮರಿಸಿದರು. ನಿರಂತರ ಓದು, ಪರಿಶ್ರಮ, ಆಸಕ್ತಿ,ನಾಡಿನ ಕುರಿತು ಪ್ರೀತಿ, ದೇಶಪ್ರೇಮದ ಕುರಿತು ಮಕ್ಕಳೊಂದಿಗೆ ಮಕ್ಕಳಾಗಿ ಮಾತುಕತೆ ನಡೆಸಿದರು.

    300x250 AD

    ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ತುಂಬಾ ಆಸಕ್ತಿಯಿಂದ ಪಾಲ್ಗೊಂಡು ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಕುರಿತಾಗಿ ತಾವೇ ರಚಿಸಿದ ‘ಗುಂಡ’ ಕವನ ವಾಚಿಸಿದರು.

    ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆ, ಕನ್ನಡ ಶಿಕ್ಷಕರಾದ ಸೀತಾ ಭಟ್, ಪದ್ಮಲತಾ ಶೆಟ್ಟಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top