ಶಿರಸಿ: ಮರಾಠಿ ಕೊಪ್ಪದಲ್ಲಿನ ಅಜಿತ ಮನೋಚೇತನ ಟ್ರಸ್ಟ್.. ವಿಶೇಷ ಚೇತನ ಮಕ್ಕಳ ಶಾಲೆಗೆ ಶಿರಸಿ ಲಿಯೋ ಕ್ಲಬ್ ಜ.31 ರ ಸೋಮವಾರ ಭೇಟಿ ನೀಡಿತು.
ಅಜಿತ್ ಮನೋಚೇತನ ಟ್ರಸ್ಟ್ನ ಬಗ್ಗೆ ಶ್ರೀಮತಿ ಲಯನ್ ಜ್ಯೋತಿ ವಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.1997 ರಲ್ಲಿ ಟ್ರಸ್ಟ್ ನ ಸ್ಥಾಪನೆಯ ಹಿನ್ನೆಲೆ, ಅದು ಬೆಳೆದು ಬಂದ ರೀತಿ, ಇಂದು 46 ವಿಶೇಷ ಚೇತನ ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಸಮಾಜಮುಖಿಯಾಗಿ ಅವರನ್ನು ಮುಂದೆ ತರುವಲ್ಲಿ ಶಾಲೆಯ ಪ್ರಯತ್ನವನ್ನು ಮನೋಜ್ಞವಾಗಿ ವಿವರಿಸಿದರು.
ನಂತರದಲ್ಲಿ ಲಿಯೋ ಅಧ್ಯಕ್ಷೆ ಲಿಯೋ ಸ್ತುತಿ ತುಂಬಾಡಿ, ಲಿಯೋ ಭೂಮಿಕಾ ಹೆಗಡೆ ಮಕ್ಕಳ ಕುರಿತು ಮಾತನಾಡಿದರು.
ಲಿಯೋ ಕ್ಲಬ್ ಸದಸ್ಯರುಗಳು ವಿಶೇಷ ಮಕ್ಕಳಿಗಾಗಿ ಹಲವು ವಿಧದ ಆಟಗಳನ್ನು, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿಶೇಷ ಚೇತನ ಮಕ್ಕಳ ಜೊತೆಯಲ್ಲಿ ಲಿಯೋಗಳು ಹಾಡಿ, ನಲಿದು ,ಕುಣಿದು ಕುಪ್ಪಳಿಸಿದರು. ಅಲ್ಲಿಯ ವಿದ್ಯಾರ್ಥಿಯು ಶಿರಸಿ ಲಿಯೋ ಕ್ಲಬ್ ನಡೆಸಿ ಕೊಟ್ಟಂತಹ ಕಾರ್ಯಕ್ರಮದ ಕುರಿತಾಗಿ ವಂದನೆಗಳನ್ನು ಸಲ್ಲಿಸಿದನು.
ಲಿಯೋ ಕ್ಲಬ್ ವತಿಯಿಂದ ಸಿಹಿ ಹಂಚಲಾಯಿತು ಮತ್ತು ಕ್ರೇಯಾನ್ಸ್ ಬಣ್ಣದ ಸೆಟ್ ಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಯಿತು. ಶಿರಸಿ ಲಿಯೋ ಕ್ಲಬ್ ಸದಸ್ಯರುಗಳು ಇಲ್ಲಿನ ವಿದ್ಯಾರ್ಥಿಗಳ ಜೊತೆಯಲ್ಲಿ ಬೆರೆತು ಹೊಸತೊಂದು ಅನುಭವಗಳ ಜೊತೆಯಲ್ಲಿ ಮರಳಿದರು.
ಈ ಕಾರ್ಯಕ್ರಮದಲ್ಲಿ ಲಿಯೋ ಕ್ಲಬ್ ಅಡ್ವೈಸರ್ ಲಯನ್ ವಿನಯ್ ಹೆಗಡೆ, ಎಂ. ಜೆ. ಎಫ್ ಲಯನ್ ರಮಾ ಪಟವರ್ಧನ್, ಲಯನ್ ಗುರುರಾಜ ಹೊನ್ನಾವರ್, ಲಯನ್ ಜ್ಯೋತಿ ವಿ ಭಟ್, ಲಿಯೋ ಕ್ಲಬ್ ಅಧ್ಯಕ್ಷರಾದ ಸ್ತುತಿ ತುಂಬಾಡಿ, ಕಾರ್ಯದರ್ಶಿ ವಾಸವಿ ಜೋಷಿ, ಖಜಾಂಚಿ ತೈಬಾ ತಬಸ್ಸುಮ್, ಲಿಯೋ ಕ್ಲಬ್ ನ ಸದಸ್ಯರುಗಳು, ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ್ ಹೆಗಡೆ, ಸಹಶಿಕ್ಷಕಿ ಸೀತಾ ವಿ. ಭಟ್ ಉಪಸ್ಥಿತರಿದ್ದರು.