ಶಿರಸಿ: ಹಳೆ ವಿದ್ಯಾರ್ಥಿಗಳೇ ಸೇರಿಕೊಂಡು ತಾವು ಕಲಿತ ಶಾಲಾ ಈಗಿನ ಮಕ್ಕಳಿಗೆ ಆಧುನಿಕ ಕಲಿಕಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇ ಕಲಿಕಾ ಕೇಂದ್ರಕ್ಕೆ ನೆರವಾದರು.
ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರೇ ಹುಲೇಕಲ್ ನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಸ್ಮಾರ್ಟ್ ಟಿವಿ, ಡಿಶ್ ಸಹಿತ ಉಚಿತವಾಗಿ ನೀಡಿದರು. ಚಂದನ ವಾಹಿನಿ ಸಹಿತ ಇ ಕಲಿಕಾ ಕೇಂದ್ರದಲ್ಲಿ ವೀಕ್ಷಿಸಲು ಅನುಕೂಲ ಮಾಡಲಾಯಿತು.
ನೂತನ ಕಲಿಕಾ ಕೇಂದ್ರವನ್ನು ಬಿಇಓ ಎಂ.ಎಸ್.ಹೆಗಡೆ ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಎಂ.ಕೆ.ನಾಯ್ಕ, ಪ್ರಸನ್ನ ಹೆಗಡೆ, ಸಿಆರ್ ಪಿ ಡಿ.ಪಿ.ಹೆಗಡೆ, ಎಸ್ ಡಿಎಂಸಿ ಅಧ್ಯಕ್ಷೆ ರೇಖಾ ಹೆಗಡೆ ಬೆಳ್ಳಹದ್ದ, ಮುಖ್ಯಾಧ್ಯಾಪಕಿ ಜಯಲಕ್ಷ್ಮೀ ಹೆಗಡೆ, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಇತರರು ಇದ್ದರು.