ಯಲ್ಲಾಪುರ: ತಾಲೂಕಿನ ವಜ್ರಳ್ಳಿಯಲ್ಲಿ ಗುರುವಾರ ರಾತ್ರಿ ಯಕ್ಷಶ್ರೀ ಕಲಾ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ ಪ್ರದರ್ಶನಗೊಂಡ ಶನೇಶ್ವರ ಮಹಾತ್ಮೆ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಭಟ್ಟ ಅಚವೆ, ಮದ್ದಲೆವಾದಕರಾಗಿ ಶಂಕರ ಭಾಗ್ವತ, ಶಿವರಾಮ ಕೋಮಾರ, ಚಂಡೆವಾದಕರಾಗಿ ಮಹಾಬಲೇಶ್ವರ ನಾಯ್ಕನಕೆರೆ, ನಾರಾಯಣ ಕೋಮಾರ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಕುಮಟಾ ಗಣಪತಿ ನಾಯ್ಕ, ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಚಂದ್ರಹಾಸ ಗೌಡ ಹೊಸಪಟ್ಟಣ, ಕಾಸರಕೋಡ, ಸದಾಶಿವ ಮಲವಳ್ಳಿ, ಅನಂತ ಗದ್ದೆ, ದೀಪಕ ಭಟ್ಟ ಕುಂಕಿ, ಶ್ರೀಧರ ಭಟ್ಟ ಅಣಲಗಾರ, ಉಮೇಶ ಗೌಡ ಮುಂತಾದವರು ಪಾತ್ರ ನಿರ್ವಹಿಸಿದರು. ಸಂಘಟಕ ತಿಮ್ಮಣ್ಣ ಕೋಮಾರ ಕಲಾವಿದರನ್ನು ಗೌರವಿಸಿದರು.