ಕಾರವಾರ: ತೋಡುರ ಗ್ರಾಮದ ಶ್ರೀ ನಾಗದೇವತಾ ವಾರ್ಷಿಕೋತ್ಸವದ ನಿಮಿತ್ತ ಯುವ ಲೇಖಕ ಪ್ರಶಾಂತ ಬಿಮಾ ನಾಯ್ಕ ವಿರಚಿತ ವಿನೂತನ ಬಗೆಯ ಕೌಟುಂಬಿಕ ನಾಟಕ ಕುರುಡ ಕಟ್ಟಿದ ಸಾಮ್ರಾಜ್ಯ ಹಸ್ತಪ್ರತಿ ಬಿಡುಗಡೆ ಮೂಲಕ ಲೋಕಾರ್ಪಣೆ ಹಾಗೂ ನಾಟಕದ ಪ್ರಥಮ ಪ್ರಯೋಗ ಅಂಬಾಬವಾನಿ ನಾಟ್ಯ ಮಂಡಳಿ ಚಂಡಿಯಾದವರಿಂದ ಯಶಸ್ವಿಯಾಗಿ ನಡೆಯಿತು.
ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದ ತೋಡುರ ಗ್ರಾಪಂ ಅಧ್ಯಕ್ಷ ಪೇರು ಗೌಡ, ಇಂದಿನ ಕಾಲದಲ್ಲಿ ಯುವ ಕಲಾವಿದರು ಹೆಚ್ಚೆಚ್ಚು ಬೆಳೆಯಬೇಕು ಎಂದರು.
ಕಾರವಾರ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ಬಾಬು ಶೇಖ ಮಾತನಾಡಿ, ಇಂದಿನ ದಿನಗಳಲ್ಲಿ ಯುವ ಕಲಾವಿದರು ಕಲೆಯನ್ನು ಬೇಳೆಸುವ ಕಾರ್ಯ ಮಾಡುತ್ತಿರುವುದು ಒಳ್ಳೆಯ ವಿಚಾರ. ಈ ನಾಟಕ ರಾಜ್ಯಾದ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾಜ ಸೇವಕ ಹಾಗೂ ಹಿರಿಯ ರಂಗಭೂಮಿ ಕಲಾವಿದ ವೆಂಕಟರಾಯ್ ಪೆಡ್ನೇಕರ ಶುಭ ಹಾರೈಸಿದರು. ಗ್ರಾಪಂ ಸದಸ್ಯ ಚಂದ್ರಕಾಂತ ಚಿಂಚಣಕರ ಮಾತನಾಡಿ, ನಾಟಕ ಕಲೆಯನ್ನು ಬೆಳೆಸಲು ನಮ್ಮ ಸಹಾಯ, ಸಹಕಾರ ಸದಾ ಇದೆ ಎಂದು ನುಡಿದರು.
ವೇದಿಕೆಯಲ್ಲಿ ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಉಪಾಧ್ಯಕ್ಷ ಸುರೇಶ ನಾಯ್ಕ, ರಾಜೇಶ ನಾಯ್ಕ ತೋಡುರ, ತೋಡುರ ಗ್ರಾ.ಪಂ ಉಪಾಧ್ಯಕ್ಷ ಸೀಮಾ ಗುನಗಿ, ಸದ್ಯಸ್ಯರಾದ ಸಂತೋಷ ನಾಯ್ಕ, ಕರುಣಾ ನಾಯ್ಕ, ವಿಮಲಾ ಆಗೇರ, ಹಿರಿಯರಾದ ಬಿಮಾ ನಾಯ್ಕ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ನುಡಿದರು. ಲೇಖಕ ಪ್ರಶಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷ, ಹಿರಿಯ ರಂಗಭೂಮಿ ಕಲಾವಿದ ರಾಮಾ ನಾಯ್ಕ, ಹಿರಿಯ ಲೇಖಕ ಮಾರುತಿ ಬಾಡಕರ, ಹಿರಿಯ ರಂಗಭೂಮಿ ಕಲಾವಿದ ರಮೇಶ ಗುನಗಿ, ಜನಾರ್ದನ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ಜವಾಬ್ದಾರಿಯೊಂದಿಗೆ ಉದ್ಘಾಟನಾ ಕಾರ್ಯಕ್ರಮದ ನಿರ್ವಹಣೆಯನ್ನು ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಅಂಚೇಕರ ನಡೆಸಿಕೊಟ್ಟರು. ನಂತರ ಅಂಬಾಬವಾನಿ ನಾಟ್ಯ ಮಂಡಳಿಯಿಂದ ನಡೆದ ಕುರುಡ ಕಟ್ಟಿದ ಸಾಮ್ರಾಜ್ಯ ನಾಟಕ ಕಲಾಪ್ರೇಕ್ಷಕರ ಮನಗೆದ್ದು ಯಶಸ್ವಿಗೊಂಡಿತು.