ಕಾರವಾರ: ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಾರ್ಷಿಕ ಸಭೆಯನ್ನು ಫೆ.7 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಕುಮಟಾದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದೆ.
ಸದಸ್ಯತ್ವ ಪಡೆದ ಎಲ್ಲ ಸದಸ್ಯರು ಕೋವಿಡ್ 19 ಮತ್ತು ಒಮಿಕ್ರಾನ್ ರೋಗ ತಡೆಗಟ್ಟಲು ಸರಕಾರದ ನಿಯಮದಂತೆ ಮಾಸ್ಕ್ ಧರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾಶಿವ ಎನ್. ಗಾವಡಿ ತಿಳಿಸಿದ್ದಾರೆ.