ಅಂಕೋಲಾ : 207 ಮಿನಿ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರರಿಗೆ ಗಾಯಗಳಾದ ಘಟನೆ ತಾಲೂಕಿನ ರಾ.ಹೆ 66 ಬಾಳೆಗುಳಿ ಕ್ರಾಸನಲ್ಲಿ ನಡೆದಿದೆ.
ಗೋಕರ್ಣ ಸಾಣೆಕಟ್ಟಾದ ವಿನಯ ಹೊಸ್ಕಟ್ಟಾ ಮತ್ತು ಹೊನ್ನಾವರ ಕಡ್ಲೇ ಗ್ರಾಮದ ವಿಶ್ವಾ ಮಡಿವಾಳ ಇವರೆ ಗಾಯಗಳಾಗಿರುವವರು. ಇವರು ಕಾರವಾರದ ಕಡೆಯಿಂದ ಅಂಕೋಲಾ ಕಡೆಗೆ ತಮ್ಮ ಮೋಟರ ಸೈಕಲ್ಲ ಮೇಲೆ ಬರುತ್ತಿದ್ದ ವೇಳೆ 207 ವಾಹನದವನು ಅಜಾಗರೂಕತೆ ಮತ್ತು ನಿರ್ಲಕ್ಷತನದ ಚಾಲನೆಯಿಂದ ಅಪಘಾತ ಪಡಿಸಿ ವಿನಯ ಇವರ ಎಡಕಾಲಿಗೆ ಗಂಬೀರ ಸ್ವರೂಪದ ಗಾಯನೋವನ್ನು ಮತ್ತು ಹಿಂಬದಿಯ ಸವಾರನಾದ ವಿಶ್ವಾ ಮಡಿವಾಳ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ. ಗಾಯಾಳುಗಳಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 207 ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ವಿನಯ ತಂದೆ ವಿಶ್ವಾ ಮಹಾಬಳೇಶ್ವರ ಮಡಿವಾಳ, ಅಂಕೋಲಾ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.