• Slide
    Slide
    Slide
    previous arrow
    next arrow
  • ಗಿಡ-ಮರಗಳನ್ನು ಬೆಳೆಸುವುದು ನಮ್ಮ ಕರ್ತವ್ಯ;ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ

    300x250 AD

    ಅಂಕೋಲಾ : ಪಟ್ಟಣದ ಕನಸೆಗದ್ದೆಯ ನರಸಿಂಹ ಭಜನಾ ಮಂಡಳಿಯ 48ನೇ ವರ್ಷದ ಭಜನಾ ಸಪ್ತಾಹ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನೆರವೆರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಿಡ-ಮರಗಳು ನಮ್ಮ ಆಸ್ತಿ ಅವನ್ನು ಬೆಳೆಸುವುದು ನಮ್ಮ ಕರ್ತವ್ಯ. ನಾನು ಕೇವಲ ಗಿಡಗಳನ್ನು ನೆಟ್ಟಿ ಬೆಳೆಸಿದೆ. ಅದಕ್ಕಾಗಿಯೇ ಭಾರತ ಸರಕಾರದವರು ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿದರು. ಎಲ್ಲರೂ ತಮ್ಮ ಮಕ್ಕಳಿಗೆ ಗಿಡಗಳ ಮಹತ್ವದ ಕುರಿತು ಹೇಳಿ ಗಿಡಗಳನ್ನು ಬೆಳಸಲು ಕಲಿಸಿರಿ ಎಂದರು.

    ಕಾರ್ಯಕ್ರಮದಲ್ಲಿ ಪದ್ಮಶ್ರೀ ತುಳಸಿ ಗೌಡ, ಮಂಜುನಾಥ ಜಾಂಬಳೇಕರ, ಈರಾ ಭೋವಿ, ಮಂಜುನಾಥ ನಾಯ್ಕ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡರನ್ನು ಸನ್ಮಾನಿಸಿ ಗೌರವಿಸಿದರು.

    ಎನ್.ಡಿ. ಅಂಕೋಲೇಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಶ್ರೀಮತಿ ಶಾಂತಲಾ ನಾಡಕರ್ಣಿ, ಮಂಡಳಿಯ ಅಧ್ಯಕ್ಷ ರಾಘವೇಂದ್ರ ಮಹಾಲೆ, ಗಂಗಾಧರ ಬೋವಿ ಉಪಸ್ಥಿತರಿದ್ದರು.

    300x250 AD

    ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

    ಅಶ್ವಿನಿ ಅಶೋಕ ನಾಯ್ಕ ಪ್ರಾರ್ಥನೆ ಹಾಡಿದರು. ಸುರೇಶ ಬೋವಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಕುಮಾರ ನಾಯ್ಕ ನಿರ್ವಹಿಸಿದರು. ಅಶೋಕ ಜಟ್ಟಿ ನಾಯ್ಕ ವಂದಿಸಿದರು. ಮಂಡಳಿಯ ಗಣಪತಿ ನಾಯ್ಕ, ನರೇಶ ರಾಯ್ಕರ, ಅನಿಲ ಮಹಾಲೆ, ಮಾರುತಿ ನಾಯ್ಕ, ಗಜಾನನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top