ಶಿರಸಿ: ಸ್ಥಳೀಯ ಸಂಸ್ಥೆಯ ಚುನಾವಣೆಯ ಸ್ಪರ್ಧೆಯ ರಾಜಕೀಯ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ ಜಾತಿಯನ್ನು ಸೇರ್ಪಡೆಗೊಳಿಸಬೇಕೆಂದು ಕುಂಬ್ರಿ ಮರಾಠಿ ಸಮಾಜದ ನಿಯೋಗಕ್ಕೆ ರಾಜ್ಯ ಚುನಾವಣಾ ಆಯೋಗ ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮನವಿ ಆಧಾರದಲ್ಲಿ ಮೀಸಲಾತಿಗೆ ಸೇರ್ಪಡೆಗೆ ಶಿಫಾರಸ್ಸು ಮಾಡುವುದಾಗಿ ಆಶ್ವಾಸನೆ ದೊರಕಿದೆ.
ರಾಜ್ಯ ಚುನಾವಣೆ ಆಯೋಗ ಬೆಂಗಳೂರಿನ ಕಾರ್ಯದರ್ಶಿ ಹೊನ್ನಮ್ಮ ಹಾಗೂ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಅವರಿಗೆ ಇಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹಾಗೂ ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ, ನಾಗೂರ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಅರ್ಪಿಸಿತು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ನಿಯೋಗದೊಂದಿಗೆ ಮಾತನಾಡುತ್ತಾ ಶೈಕ್ಷಣಿಕ ಮತ್ತು ಸಾಮಾಜಿಕ ಮೀಸಲಾತಿ ಪಡೆದ ಕುಂಬ್ರಿ ಮರಾಠಿ ಸಮಾಜಕ್ಕೆ ರಾಜಕೀಯ ಮೀಸಲಾತಿ ದೊರಕುವುದು ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಆಯೋಗವು ಸರಕಾರಕ್ಕೆ ಶಿಫಾರಸ್ಸು ಮಾಡುವುದೆಂದು ತಿಳಿಸಿದರು.
ಉತ್ತರ ಕ್ನನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುಂಬ್ರಿ ಮರಾಠಿ ಸಮಾಜವು ರಾಜ್ಯ ಸರಕಾರ ಹಿಂದುಳಿದ ಪಟ್ಟಿಗೆ ಸೇರ್ಪಡೆಗೊಂಡು ಎರಡು ದಶಕಗಳಾದವು. ಆದರೇ, ಸ್ಥಳೀಯ ಸಂಸ್ಥೆಯಿಂದ ಜರುಗುವ ಗ್ರಾಮ, ತಾಲೂಕ, ಜಿಲ್ಲಾ ಪಂಚಾಯತ ಹಾಗೂ ಇನ್ನೀತರ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಸರಕಾರ ನಿಗಧಿಗೊಳಿಸಿದ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ ಇಂದಿನವರೆಗೂ ಸೇರಲ್ಪಟ್ಟದ್ದು ಇರುವುದಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ರಾಜಕೀಯ ಮೀಸಲಾತಿಯಿಂದ ವಂಚಿತರಾಗಿರುವ ಕುಂಬ್ರಿ ಮರಾಠಿ ಸಮಾಜದ ನಿಯೋಗವು ಪ್ರಥಮ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಪ್ರೋ. ರವಿವರ್ಮಕುಮಾರ ಅವರ ಜೊತೆಯಲ್ಲಿ ರಾಜಕೀಯ ಮೀಸಲಾತಿ ವಂಚಿತ ಕುರಿತು ಕಾನೂನಾತ್ಮಕ ಅಂಶಗಳ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಹೆಚ್ ಹರಿ ನಿಯೋಗದೊಂದಿಗೆ ಚರ್ಚೆಯಲ್ಲಿ ಪಾಲ್ಗೋಂಡಿದ್ದರು. ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ ನಾಗೂರ, ಬಾಬು ಮರಾಠಿ, ರಾಮಚಂದ್ರ ಮರಾಠಿ, ಜಯಂತ ಅನಂತ ಮರಾಠಿ, ಪ್ರಭಾಕರ ಕೆರಿಯ ಮರಾಠಿ, ನಾಗರಾಜ ಈಶ್ವರ ಮರಾಠಿ, ಬಾಬು ಮರಾಠಿ, ರಾಮಚಂದ್ರ ಮರಾಠಿ, ರಾಮ ಮಂಜುನಾಥ ಮರಾಠಿ, ಈಶ್ವರ ಓಮು ಮರಾಠಿ ಮುಂತಾದವರು ಉಪಸ್ಥಿತರಿದ್ದರು.
ಸಂವಿಧಾನ ಬದ್ಧ ಹಕ್ಕಿನಿಂದ ವಂಚನೆ:
ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ ಜಾತಿ ಸೇರಲ್ಪಟ್ಟಿದ್ದರೂ, ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ಕೈ ಬಿಟ್ಟಿರುವುದು ಕುಂಬ್ರಿ ಮರಾಠಿಗಳು ಸಂವಿಧಾನ ಬದ್ಧ ಹಕ್ಕಿನಿಂದ ವಂಚಿತರಾಗಿರುತ್ತಾರೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ, ನಾಗೂರ ಅವರು ಹೇಳಿದರು.
ಆಯೋಗದ ಸದಸ್ಯರಾದ ರಾಜಶೇಖರ್ ಮತ್ತು ಶಾರದಾ ನಾಯ್ಕ, ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ ನಾಗೂರ ಉಪಸ್ಥಿತರಿದ್ದರು.