ಸಿದ್ದಾಪುರ :ತಾಲೂಕಿನ ಹಾರ್ಸಿಕಟ್ಟಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಸೇವಾ ಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಅನ್ನು ಗುರುವಾರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಉದ್ಘಾಟಿಸಿದರು.
ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ, ಹಾರ್ಸಿಕಟ್ಟಾ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಅಚಾರ್ಯ, ಮುಠ್ಠಳ್ಳಿ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಗೌಡ, ಚಂದ್ರಮತಿ ನಾಯ್ಕ, ನಾರಾಯಣ ಗೌಡ, ಪಲ್ಲವಿ ಗೌಡ ಇತರರಿದ್ದರು.