
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಯಾಗಿದ್ದ ಎಸ್.ಪಿ ಶಿವಪ್ರಕಾಶ ದೇವರಾಜು ಅವರನ್ನು ವರ್ಗಾವಣೆ ಮಾಡಿ ಜಿಲ್ಲೆಗೆ ಹೊಸ ಎಸ್.ಪಿಯಾಗಿ ವರ್ತಿಕಾ ಕಟಿಯಾರ್ ರವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.
ಜಿಲ್ಲೆಗೆ ಇದೇ ಮೊದಲಬಾರಿ ಮಹಿಳಾ ಎಸ್.ಪಿ ಯಾಗಿ ವರ್ತಿಕಾ ಕಟಿಯಾರ್ ರವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಮೊದಲು ಧಾರವಾಡ ನಂತರ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತಿದ್ದರು. ದಕ್ಷ ಅಧಿಕಾರಿ ಶಿವಪ್ರಕಾಶ ದೇವರಾಜು ಅವರು ಜಿಲ್ಲೆಯಲ್ಲಿ ಉತ್ತಮ ಕಾರ್ಯದಕ್ಷತೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಮಾದಕ ವಸ್ತುಗಳ ವಿರುದ್ಧ ಕಾರ್ಯಚರಣೆ, ಮಟ್ಕಾ ಕಾರ್ಯಾಚರಣೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇಲಾಖೆಯಲ್ಲಿ ಯಾವುದೇ ವಿವಾದ, ಭ್ರಷ್ಟತನವಿಲ್ಲದೇ ಪ್ರಮಾಣಿಕ ಕರ್ತವ್ಯ ನಿರ್ವಹಿಸಿದ ಇವರನ್ನು ವರ್ಗಾವಣೆ ಮಾಡಲಾಗಿದ್ದು ಇದುವರೆಗೂ ಯಾವುದೇ ಸ್ಥಾನವನ್ನು ನೀಡಿಲ್ಲ ಎಂಬ ಮಾಹಿತಿ ಇದೆ.