ಅಂಕೋಲಾ: ಜಿಲ್ಲೆಯಲ್ಲಿಂದು ಕೊರೊನಾ ಕೇಸ್ ಹೆಚ್ಚಳ ಕಂಡಿದ್ದು, ಕೊರೊನಾ ಪಾಸಿಟಿವ್ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಅದರಂತೆ ಗುರುವಾರ ಒಟ್ಟೂ 559 ಕೇಸ್ ವರದಿಯಾಗಿದ್ದು, 544 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಇಂದು ಮುಂಡಗೋಡದಲ್ಲಿ ಅತೀಹೆಚ್ಚು 111 ಕೇಸ್,ಶಿರಸಿಯಲ್ಲಿ 90 ಕೇಸ್, ಕಾರವಾರ 36, ಅಂಕೋಲಾ 28, ಕುಮಟಾ 34, ಹೊನ್ನಾವರ 42, ಭಟ್ಕಳ 35, ಸಿದ್ದಾಪುರ 44, ಯಲ್ಲಾಪುರ 48, ಹಳಿಯಾಳದಲ್ಲಿ 67, ಜೋಯಿಡಾದಲ್ಲಿ 24 ಕೇಸ್ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 811 ಕ್ಕೆ ತಲುಪಿದೆ. ಸದ್ಯ 2865 ಕೇಸ್ ಸಕ್ರಿಯವಾಗಿದೆ. ಗುರುವಾರ 544ಮಂದಿಗುಣಮುಖರಾಗಿದ್ದಾರೆ.