ಗೋಕರ್ಣ: ಇಲ್ಲಿಯ ನೆಲಗುಣಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಶಾಲೆಗೆ ಗುರುವಾರದಂದು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ ಅವರೊಂದಿಗೆ ಪ್ರಮೋದ ನಾಯಕ ಸೂರ್ವೆ ಉಪ ಆಯುಕ್ತರು ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಬೆಂಗಳೂರು ಇವರು ಭೇಟಿ ನೀಡಿದರು.
ಇವರನ್ನು ಸಂಸ್ಥೆಯ ಅಧ್ಯಕ್ಷರು ಪರಿಚಯಿಸಿ ನಂತರ ಇವರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪೂರ್ವ ತಯಾರಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಕ್ರಮಗಳನ್ನು ವಿವರಿಸಿದರು. ಗೋಕರ್ಣದಂತಹ ಹಿಂದುಳಿದ ಪ್ರದೇಶದಲ್ಲಿ ಮೊಡರ್ನ ಎಜ್ಯುಕೇಶನ್ ಟ್ರಸ್ಟ್ ನ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಅಭಿಮಾನದಿಂದ ಹೊಗಳಿಕೆಯ ಮಾತನಾಡಿದರು. ಇಲ್ಲಿನ ಸುಸಜ್ಜಿತ ಕಟ್ಟಡ , ವಿಶಾಲವಾದ ಆಟದ ಮೈದಾನ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ನ ಸೌಲಭ್ಯಗಳನ್ನೆಲ್ಲ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಮೂಡಿದ ಕೆಲವು ಪ್ರಶ್ನೆಗಳಿಗೆ ಇವರಿಂದ ಉತ್ತರ ಪಡೆದುಕೊಂಡರು.
ಅನಿರೀಕ್ಷಿತವಾಗಿ ತಮ್ಮ ಕೆಲಸದ ಒತ್ತಡದಲ್ಲಿಯೂ ಶಾಲಾ ವಿದ್ಯಾರ್ಥಿಗಳೊಂದಿಗೆ ಅಮೂಲ್ಯವಾದ ಸಮಯವನ್ನ ಹಂಚಿಕೊಂಡ ಅಧಿಕಾರಿ ಪ್ರಮೋದ ನಾಯಕ ಸೂರ್ವೆಯವರಿಗೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಮುಖ್ಯಾಧ್ಯಾಪಕರಾದ ರಾಜೇಶ ಗೋನ್ಸಾಲ್ವೆಸ್, ಹಾಗೂ ಶಿಕ್ಷಕವೃಂದದವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.