• Slide
    Slide
    Slide
    previous arrow
    next arrow
  • ಗೋಸಾವಿ ಗಲ್ಲಿ ಬಡ ಕುಟುಂಬಕ್ಕೆ ಆಹಾರ ಕಿಟ್ ನೀಡಿದ ಸುಷ್ಮಾ ರಾಜಗೋಪಾಲ್

    300x250 AD

    ಶಿರಸಿ: ಕೆಪಿಸಿಸಿಯ ಮಾಜಿ ಕಾರ್ಯದರ್ಶಿ, ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷೆ, ಶಿರಸಿ- ಸಿದ್ದಾಪುರ ಬ್ಲಾಕ್ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ರವರು ದಿ.ದೀಪಕ ಹೊನ್ನಾವರ ಅಭಿಮಾನಿ ಬಳಗದ ವತಿಯಿಂದ ನಗರದ ಗೋಸಾವಿ ಗಲ್ಲಿಯ ಕೋವಿಡ್ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳ ಸದಸ್ಯರುಗಳಿಗೆ ಆಹಾರ ವಸ್ತುಗಳ ಕಿಟ್ ವಿತರಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನಾ ಸಾಂಕ್ರಾಮಿಕ ರೋಗ ತನ್ನ ತೀವ್ರತೆಯನ್ನು ಹರಡಿದ್ದಲ್ಲದೇ, ಅನೇಕ ಅಮೂಲ್ಯ ಪ್ರಾಣಗಳಿಗೆ ಎರವಾಗಿದೆ. ಎಷ್ಟೋ ಕುಟುಂಬಗಳ ಆಧಾರ ಸ್ಥಂಭಗಳಾಗಿ ದುಡಿಯುವ ಕೈಗಳನ್ನು ಕಿತ್ತುಕೊಂಡು ಮಕ್ಕಳನ್ನು ಅನಾಥರನ್ನಾಗಿಸಿದೆ. ಕೆಲಸವಿಲ್ಲದೇ ಜನ ಸಂಕಷ್ಟ ಅನುಭವಿಸಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನಾವು ನಮ್ಮ ಕೈಲಾದ ಸಹಾಯ ಮಾಡುವ ಮೂಲಕ ನಿಮ್ಮ ಕಣ್ಣೀರು ಒರೆಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಯಾವಾಗಲೂ ನಿಮ್ಮೊಂದಿಗೆ ಕಾಂಗ್ರೆಸ್ ಪಕ್ಷ, ಮುಖಂಡರು ಸಂಪರ್ಕದಲ್ಲಿದ್ದು ಸಹಾಯ ಮಾಡುತ್ತಾರೆ ಎಂದರು.
    ನಗರ ಸಭೆಯ ಸದಸ್ಯ, ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ, ಪರಿಚಯಿಸುತ್ತ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ನೀವು ಅನುಭವಿಸಿರುವ ಕಷ್ಟವನ್ನು ತಿಳಿದುಕೊಂಡು ಸುಷ್ಮಾ ರಾಜಗೋಪಾಲ್ ರವರು ನಿಮ್ಮ ಸಹಾಯಕ್ಕೆ ಬಂದಿದ್ದಾರೆ. ಆಹಾರ ವಸ್ತುಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ ಎಂದರು.
    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮಾ ಉಗ್ರಾಣಕರ, ಕಾರ್ಯದರ್ಶಿ ಸತೀಶ ನಾಯ್ಕ ಮಧುರವಳ್ಳಿ, ಕೆಪಿಸಿಸಿ (ಮೀನುಗಾರ ವಿಭಾಗ )ಕಾರ್ಯದರ್ಶಿ ರಾಜು ಉಗ್ರಾಣಕರ್, ವಾರ್ಡ್ ಸಮಿತಿ ಅಧ್ಯಕ್ಷ ವಿನೋದ ಸಾವಂತ, ಸ್ಥಳೀಯ ಮುಖಂಡರಾದ ತಾರಾ ಮೇಸ್ತ, ಶಾರದಾ ಹೊಂಡದಕಲ್, ಪ್ರಕಾಶ ಗೋಸಾವಿ, ನಾಗೇಶ ಗೋಸಾವಿ, ಮಾರುತಿ ಭೋವಿವಡ್ಡರ, ಮುಂತಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top