ಕಾರವಾರ: ಹಳಗಾದ ದಿ ಮಾರ್ಡನ್ ಹೈಸ್ಕೂಲ್ ವಿದ್ಯಾರ್ಥಿ ಗ್ರಾಹಕರ ಸಹಕಾರ ಸಂಘ ನಿ. ಪೋಟ ನಿಯಮಕ್ಕನುಸಾರವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಕಾರವಾರ ಸಹಕಾರ ಸಂಘಗಳ ಉಪನಿಬಂಧಕರ ಆದೇಶದ ಮೇರೆಗೆ ದಿನಾಂಕ ಮಾ.19, 2015ರ ಪ್ರಕಾರ ಸಮಾಪನೆಗೊಂಡಿದ್ದು, ಸಮಾಪನಾಧಿಕಾರಿಯಾಗಿ ಕಾರವಾರ ತಾಲೂಕಿನ ಹಳಗಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಮಾರಾಟಾಧಿಕಾರಿಯನ್ನು ನೇಮಿಸಲಾಗಿದೆ.
ಸಂಘದ ವ್ಯವಹಾರವನ್ನು ಪೂರ್ಣಗೊಳಿಸುವ ಸಲುವಾಗಿ ಸಂಘದ ಕೊಡತಕ್ಕಂತಹ ಮತ್ತು ಬರತಕ್ಕ ಬಾಬ್ತುಗಳ ವಿಲೇವಾರಿ ಕುರಿತು ಚರ್ಚಿಸಲು, ಸಂಘದ ಅಡಾವೆಯನ್ನು ಶೂನ್ಯಗೊಳಿಸಿ, ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸಂಘದ ಅಂತಿಮ ಸರ್ವ ಸಾಧಾರಣಾ ಸಭೆಯನ್ನು ಫೆ.11 ರಂದು ಮಧ್ಯಾಹ್ನ 3 ಗಂಟೆಗೆ ಕಾರವಾರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯಲ್ಲಿ ಕರೆಯಲಾಗಿರುತ್ತದೆ.
ಸಂಘದ ಸರ್ವ ಸದಸ್ಯರು ತಪ್ಪದೇ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಅದರ ಮೇಲಿನ ಹಕ್ಕು ಬಾಧ್ಯತೆಗಳನ್ನು ಕಳೆದುಕೊಳ್ಳುತ್ತೀರೆಂದು ಹಳಗಾ ದಿ ಮಾರ್ಡನ್ ಹೈಸ್ಕೂಲ್ ವಿದ್ಯಾರ್ಥಿ ಗ್ರಾಹಕರ ಸಹಕಾರ ಸಂಘದ ಸಹಾಯಕ ನಿಬಂಧಕರ ಕಛೇರಿ ಮಾರಾಟಾಧಿಕಾರಿ ಸಮಾಪನಾಧಿಕಾರಿ ತಿಳಿಸಿದ್ದಾರೆ.