ಹೊನ್ನಾವರ : ತಾಲೂಕಿನ ಮಂಕಿ ಅಡಿಕೆಕುಳಿಯಲ್ಲಿ ಕುಂಬ್ರಿ ಮರಾಠಿ ಸಮಾಜದ ತಾಲೂಕಾ ಸಮಾವೇಶ ಯಶಸ್ವಿಯಾಗಿ ನಡೆಯಿತು.
ತಾಲೂಕಾ ಸಮಾವೇಶದ ಜೊತೆಗೆ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘ ಹಾಗೂ ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ದೇವರಾಜ ಮರಾಠಿ ಗೌರವ ಉಪಸ್ಥಿತಿ ವಹಿಸಿದ್ದರು. ತಾಲೂಕಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಕೃಷ್ಣ ಮರಾಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಹದೇವ್ ಮಡ್ಡಿ, ಚಿತ್ತಾರ ಪಂಚಾಯತ್ ಪಿಡಿಒ ರಾಧಾಕೃಷ್ಣ ನಾಯ್ಕ್,ಶಿಕ್ಷಕರಾದ ದಿವಾಕರ ಮರಾಠಿ ,ಊರ ಮುಖಂಡರಾದ ಬೊಮ್ಮಡಾ ಮರಾಠಿ ,ಶಿವಾನಂದ ಮರಾಠಿ,ರುಕ್ಮ ಮರಾಠಿ,ಉಮೇಶ್ ಮರಾಠಿ,ದತ್ತು ಮರಾಠಿ,ಕೃಷ್ಣ ಮರಾಠಿ,ಗಣಪತಿ ಮರಾಠಿ ಮತ್ತಿತರಿದ್ದರು.