ಬೆಂಗಳೂರು: ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಇಂದು ನಗರದ ಯಶವಂತಪುರ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಯಲ್ಲಿ ಮಂಡಳಿಯ 92 ನೇ ಸಭೆಯನ್ನು ನಡೆಸಿದರು.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ, ಮಾಲಿಕ ಮತ್ತು ಸರಕಾರದ ಅನುಪಾತ 20 ರೂ, 40 ರೂ,20 ರೂ ವಂತಿಕೆ ಪಾವತಿ ಮಾಡಲಾಗುತ್ತಿತ್ತು. ಅದನ್ನು 50 ರೂ, 100 ರೂ, 50 ರೂ ಪರಿಷ್ಕರಣೆ ಮಾಡಬೇಕೆಂದು ನಡೆದ ಚರ್ಚೆಯಲ್ಲಿ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ, ಈಗಾಗಲೆ ಕೊವಿಡ್ ಸೋಂಕಿನ ಬಾರ ಎಲ್ಲರ ಮೇಲೆ ಇರುವುದರಿಂದ, ಈಗಲೆ ಹೊರೆ ಹಾಕುವುದು ಬೇಡ, ಜುಲೈ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡದ18, ಉಡುಪಿಯ 17, ಉತ್ತರ ಕನ್ನಡದ 4 ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಒಟ್ಟು 3425 ಮಹಿಳೆಯರಿಗೆ , ಉಚಿತ ಬಸ್ ಪಾಸ್ ನೀಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿದ 21 ಸಾವಿರ ರೂ ಇದ್ದ, ವೇತನವನ್ನು 26 ಸಾವಿರ ರೂ ಕ್ಕೆ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ,ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ, ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪಾಪಣ್ಣ , ಮಹಿಳಾ ಸದಸ್ಯರಾದ ಲಾವಣ್ಯ ಹಾಗೂ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿ ಚಿದಾನಂದ ಹಾಗೂ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಪ್ರತಿನಿಧಿ, ಹಿಂದ್ ಮಜದೂರ್ ಕಿಸಾನ್ ಸಮಿತಿ ಪ್ರತಿನಿಧಿಗಳು, ಭಾರತ ಮಜದೂರ್ ಸಂಘಟನೆಯ ಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.