
ಶಿರಸಿ: ಕದಂಬ ಮಾರ್ಕೆಟಿಂಗ್ ವತಿಯಿಂದ ಸಾಮಾಜಿಕ ಮಾಧ್ಯಮದ ಹೊಸ ಸಂಚಲನವಾಗಿರುವ ಕ್ಲಬ್ ಹೌಸ್ ಮೂಲಕ ಯುವ ರೈತರೊಂದಿಗಿನ ಮಾತುಕತೆ ಸರಣಿಯನ್ನು ಜು.15 ಗುರುವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಅಚ್ಚನಳ್ಳಿಯ ಸಚಿನ್ ಭಟ್ಟ ತಮ್ಮ ಕೃಷಿ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಇವರ ವೈವಿಧ್ಯಮಯ ಕೃಷಿ ಚಟುವಟಿಕೆಗಳನ್ನು ಗುರುತಿಸಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದವರು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿರುವದು ವಿಶೇಷ. ಕ್ಲಬ್ ಹೌಸ್ ಆಪ್ ನಲ್ಲಿ `ಕದಂಬ’ ಕ್ಲಬ್ ಫಾಲೋ ಮಾಡುವ ಮೂಲಕ ಇವರೊಡನೆ ಸಂವಾದದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.