ಕುಮಟಾ: ದುರ್ಗಾಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಹಾಗೂ ರಾಜಾ ರುದ್ರಕೋಪ ಉಚಿತ ಯಕ್ಷಗಾನ ಪ್ರದರ್ಶನ ಫೆ.04 ರ ಶುಕ್ರವಾರ ರಾತ್ರಿ 10 ರಿಂದ ಮುಂಜಾನೆ 6 ರ ವರೆಗೆ ಕವಲೋಡಿಯಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಆಗಮಿಸಲಿದ್ದಾರೆ.
ಮುಮ್ಮೇಳದಲ್ಲಿ ಗೋಪಾಲ ಆಚಾರ್ಯ ತೀರ್ಥಹಳ್ಳಿ ಸುಬ್ರಹ್ಮಣ್ಯ ಚಿಟ್ಟಾಣಿ ಲಕ್ಷ್ಮಿ & ಶಂಕರ ಹೆಗಡೆ ನೀಲ್ನೋಡು, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಭಟ್ಟ ಕಾಸರಕೋಡು, ಕಾರ್ತಿಕ , ರಾಮಕೃಷ್ಣ ಭಟ್ಟ ಹಳ್ಳಾರ್, ಅವಿನಾಶ ಕೊಪ್ಪ, ಕೃಷ್ಣ ಗೌಡ ಮೊದಲಾದವರು ಶ್ರೀನಿವಾಸ ಕಲ್ಯಾಣ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಗಣಪತಿ ಹೆಗಡೆ ತೋಟಿಮನೆ, ಚಂದ್ರಹಾಸ ಗೌಡ ಹೊಸಪಟ್ಟಣ & ಕಾರ್ತಿಕ್ ಚಿಟ್ಟಾಣಿ, ಶ್ರೀಧರ ಭಟ್ಟ ಕಾಸರಕೋಡು ಅಶೋಕ ಭಟ್ಟ ಸಿದ್ದಾಪುರ, ಮಾರುತಿ ಬಯಲುಗದ್ದೆ, ನಾಗೇಶ ಕುಳಿಮನ, ಲಕ್ಷ್ಮಣ ನಾಯ್ಕ ಚಿತ್ತಾರ, ಕೃಷ್ಣ ಹೊರಾಡ್ ಇನ್ನೂ ಮುಂತಾದವರು ರಾಜಾ ರುದ್ರಕೋಪ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಗೋಪಾಲ ಆಚಾರ್ಯ ತೀರ್ಥಹಳ್ಳಿ ಇವರಿಗೆ ಗೌರವ ಸನ್ಮಾನ ನಡೆಯಲಿದೆ.
ಇಲ್ಲಿಗೆ ಆಗಮಿಸುವ ಎಲ್ಲರೂ ಸರಿಯಾದ ರೀತಿಯಲ್ಲಿ ಕೋವಿಡ್ ನಿಯಮ ಪಾಲಿಸಬೇಕೆಂದು ಪ್ರಕಟಣೆ ತಿಳಿಸಿದೆ.