ಅಂಕೋಲಾ : ತಾಲೂಕಿನ ಶಕ್ತಿ ದೇವತೆ ಬಿಳಿಗಿರಿ ಅಮ್ಮದೇವಿ ಹಾಗೂ ಪರಿವಾರ ದೇವತೆಗಳ ದೇಗುಲದಲ್ಲಿ ಪೂರ್ಣಾಹುತಿ, ಸಂಪ್ರೋಕ್ಷಣಾ ಹೋಮಾದಿಗಳು ಫೆ.4 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.
ಭಕ್ತಾದಿಗಳ, ಸಾರ್ವಜನಿಕರ ಪೂಜಾ ಕೈಂಕರ್ಯಕ್ಕೆ ದೇವಾಲಯ ತೆರೆದುಕೊಳ್ಳುತ್ತದೆ ಮತ್ತು ನಿತ್ಯಪೂಜೆ ಆರಂಭಗೊಳ್ಳುತ್ತದೆ. ಕಾರಣ ಎಲ್ಲ ಭಕ್ತಾದಿಗಳು ಅಂದು ದೇವಾಲಯಕ್ಕೆ ಆಗಮಿಸಿ ಮಹಾ ಮಂಗಳಾರತಿ ಹಾಗೂ ಇತರೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಬೇಕಾಗಿ ಬಿಳಿಗಿರಿ ವ ಬೊಮ್ಮಯ್ಯ ದೇವಾಲಯದ ಮೊಕ್ತೇಸರರು ಮತ್ತು ಬೋಳೆ, ಹೊಸ್ಕೆರಿ,ಹೊಸಗದ್ದೆ ಸಮಸ್ತ ನಾಗರಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.