
ಶಿರಸಿ: ಇಲ್ಲಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಸ್ವರ್ಣವಲ್ಲೀ ಯುವ ಪರಿಷತ್, ಸ್ವರ್ಣವಲ್ಲೀ ಭಕ್ತವೃಂದ ಸಹಕಾರದಲ್ಲಿ ‘ಶ್ರೀ ಸ್ವರ್ಣವಲ್ಲೀ ವೈಭವ’ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಶ್ರೀ ಸ್ವರ್ಣವಲ್ಲಿ ಪರಿಷತ್ ಜು.25 ರಂದು ಆನ್‍ಲೈನ್ ಮೂಲಕ ಪ್ರಸ್ತುತ ಪಡಿಸಲಿದೆ. ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ ಬಹುಮಾನ 3 ಸಾವಿರ ರೂ. ಮತ್ತು ತೃತೀಯ ಬಹುಮಾನ 2 ಸಾವಿರ ರೂ. ನೀಡಲಾಗುತ್ತಿದೆ. ರಸಪ್ರಶ್ನೆ ಕಾರ್ಯಕ್ರಮದ ಆನ್‍ಲೈನ್ ಲಿಂಕನ್ನು ಜು.23ರಂದು ವಾಟ್ಸ್‍ಅಪ್ ಮತ್ತು ಫೇಸ್‍ಬುಕ್ ಮೂಲಕ ಪ್ರಕಟಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.