ಅಂಕೋಲಾ: ಮೋಟಾರು ಬೈಕಿಗೆ 207 ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡರೆ, ಹಿಂಬದಿ ಸವಾರನೂ ಗಾಯಗೊಂಡ ಘಟನೆ ತಾಲೂಕಿನ ಬಾಳೆಗುಳಿ ವರದರಾಜ ಹೊಟೇಲ್ ಹತ್ತಿರ ಇತ್ತೀಚೆಗೆ ಸಂಭವಿಸಿದೆ. ಬೈಕ್ ಸವಾರ ಗೋಕರ್ಣ ಸಮೀಪದ ಸಾಣೆಕಟ್ಟಾ ನಿವಾಸಿ ವಿನಯ ಘಟ್ಟಾ ಹೊಸ್ಕಟ್ಟಾ (21) ಇವರ ಎಡಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಹಿಂಬದಿ ಸವಾರ ಹೊನ್ನಾವರದ ಕಡ್ಲೆ ಹೆಬ್ಬಾರನಕೇರಿ ನಿವಾಸಿ ವಿಶ್ವ ಮಹಾಬಲೇಶ್ವರ ಮಡಿವಾಳ (21) ಈತನಿಗೂ ಚಿಕ್ಕಪುಟ್ಟ ಗಾಯಗಳಾಗಿವೆ.ಕಾಲೇಜು ವಿದ್ಯಾರ್ಥಿಗಳಾದ ಇವರು ಜನೆವರಿ 31 ರಂದು ಮದ್ಯಾಹ್ನ ಕಾರವಾರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಬಾಳೆಗುಳಿ ಹತ್ತಿರ ಕಚ್ಚಾ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆಯಿಂದ ಪಿಕಪ್ ವಾಹನ ಸಂಖ್ಯೆ ಕೆ.ಎ30/9390 ಚಲಾಯಿಸಿಕೊಂಡು ಬಂದು ಬೈಕಿಗೆ (KA 47- H 5084) ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಐಆರ್ ಬಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.