ಶಿರಸಿ: ಅರಣ್ಯವಾಸಿಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದಅಧಿಕಾರಿಗಳ ಸಮಾಲೋಚನೆಯೊಂದಿಗೆ ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ಇಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿತು.
ಸುಪ್ರೀಂ ಕೋರ್ಟನಲ್ಲಿ ಅನಧೀಕೃತ ಅರಣ್ಯ ವಾಸಿಗಳನ್ನ ಪರಿಸರವಾದಿಗಳ ರಿಟ್ ಪಿಟಿಷನ್ ಅರ್ಜಿ ಅಂತಿಮ ವಿಚಾರಣೆಗೆ ಬರುತ್ತಿರುವುದರಿಂದ ಹಾಗೂ ರಾಜ್ಯಾದ್ಯಂತ ಅರಣ್ಯ ವಾಸಿಗಳ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆಯ ಘಟನೆಗಳು ಹೆಚ್ಚುತ್ತಿರುವುದರಿಂದ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ಹೋಗುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಬೆಂಗಳೂರಿಗೆ ಹೊರಟಿರುವ ನಿಯೋಗದಲ್ಲಿ ವಿವಿಧ ತಾಲೂಕ ಅಧ್ಯಕ್ಷರುಗಳಾದ ಮಂಜುನಾಥ ಮರಾಠಿ ನಾಗೂರ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ನೂರ್ ಅಹಮ್ಮದ್ ಸೈಯದ್ ಸಾಬ, ದ್ಯಾಮಣ್ಣ ಜಗದಾಳಿ, ಬಾಬು ಮರಾಠಿ, ರಾಮಚಂದ್ರ ಮರಾಠಿ, ರಾಜು ನರೇಬೈಲ್, ಶೇಖರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.