ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳದ ಸಿಂಗಾರಪ್ರಿಯ ನಾಗಚೌಡೇಶ್ವರಿ ದೇವಾಲಯದಲ್ಲಿ ಸಿಂಗಾರಪ್ರಿಯ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ ಹಾಗೂ ಯಕ್ಷಗಾನ ಪ್ರದರ್ಶನ ಫೆ.3 ರಂದು ಸಂಜೆ 6ಕ್ಕೆ ನಡೆಯಲಿದೆ.
ಶಿರಸಿ ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ ಯಕ್ಷಗಾನ ಕೃತಿ ಬಿಡುಗಡೆ ಮಾಡಲಿದ್ದು, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ್ ಅಧ್ಯಕ್ಷತೆವಹಿಸುವರು. ಶಿರಸಿಯ ನ್ಯಾಯವಾದಿ ಗಣತಿ ಹೆಗಡೆ ಕಾಗೇರಿ, ತಾಪಂ ಮಾಜಿ ಅಧ್ಯಕ್ಷ ಸುಧೀರ್ ಬಿ.ಗೌಡರ್ ಹೆಗ್ಗೋಡಮನೆ, ಕೃತಿಕಾರ ರಾಮಚಂದ್ರ ನಾಯ್ಕ ಹೆಮ್ಮನಬೈಲ್, ದೇವಸ್ಥಾನದ ಧರ್ಮದರ್ಶಿ ಅಶೋಕ ನಾಯ್ಕ ಹಳಿಯಾಳ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಬೇಡ್ಕಣಿ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಲಕ್ಷ್ಮಣ ನಾಯ್ಕ ಬೇಡ್ಕಣಿ,ಹಳಿಯಾಳ ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಎಂ.ಬಿ.ನಾಯ್ಕ ಹಳಿಯಾಳ ಉಪಸ್ಥಿತರಿರುತ್ತಾರೆ.
ನಂತರ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಅವರಿಂದ ಸಿಂಗಾರಪ್ರಿಯ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.