ಶಿರಸಿ: ಜ.30 ರಂದು ಸ್ವರ್ಣವಲ್ಲೀ ರಾಜರಾಜೇಶ್ವರಿ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಎನ್. ಎಸ್. ಎಸ್. ಘಟಕದಿಂದ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಡಾ. ಶಂಕರ ಭಟ್ ಉಂಚಳ್ಳಿ ಮಾತನಾಡಿ ನಮ್ಮ ದೇಶದ ರಕ್ಷಣೆಗಾಗಿ ಅನೇಕ ವ್ಯಕ್ತಿಗಳು ಹೋರಾಡಿದ್ದಾರೆ. ಅವರ ತ್ಯಾಗ ಬಲಿದಾನಗಳಿಂದಾಗಿ ನಾವಿಂದು ಸ್ವತಂತ್ರವಾಗಿ, ಸುಖವಾಗಿ ಬದುಕುತ್ತಿದ್ದೇವೆ. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗೋಣ ಎಂದರು.
ಡಾ. ನಾಗರಾಜ ಭಟ್ಟ ಮಾತನಾಡಿ ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ ದೇಶಕ್ಕಾಗಿ ಹೋರಾಡಿದ್ದಾರೆ. ಅವರ ತ್ಯಾಗ, ಬಲಿದಾನಗಳನ್ನು ನಾವು ಸದಾ ನೆನಪಿನಲ್ಲಿಡಬೇಕು. ಅಂತಹ ಮಹಾತ್ಮರ ಚರಿತ್ರೆಯನ್ನು ಓದಬೇಕು ಎಂದು ತಿಳಿಸಿದರು.
ಡಾ. ವಿನಾಯಕ ಭಟ್ ಕಾರ್ಯಕ್ರಮ ನಿರ್ವಹಿಸಿದರು.