ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ ಸದಸ್ಯೆಯೊರ್ವರಿಗೆ ಅದೇ ಪಂಚಾಯತನ ಉಪಾಧ್ಯಕ್ಷ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮ ಪಂಚಾಯತ ಸದಸ್ಯೆ ಸವಿತಾ ಶಂಕರ ನಾಯ್ಕರವರಿಗೆ ಅದೇ ಗ್ರಾಮ ಪಂಚಾಯತದ ಉಪಾಧ್ಯಕ್ಷ ಶ್ರೀಧರ ಗೋವಿಂದ ನಾಯ್ಕ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಹಡಿನಬಾಳ ಗ್ರಾಮ ಪಂಚಾಯತದಲ್ಲಿ ಕರೆದಿದ್ದ ನ್ಯಾಯ ಸಮತಿ ಸಭೆಗೆ ಹೋದಾಗ ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಗೋವಿಂದ ನಾಯ್ಕ ಇತನು ನನ್ನನ್ನು ಉದ್ದೇಶಿಸಿ ಸಭೆಯಲ್ಲಿ ಅವಾಚ್ಯವಾಗಿ ಬೈದು, ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ, ಕೊಲೆ ಮಾಡಿ ಎಸೆಯುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾನು ಗ್ರಾಮ ಪಂಚಾಯತ ಉಪಾದ್ಯಕ್ಷನಾಗಿದ್ದು ಈಗಾಗಲೇ ನನ್ನ ಮೇಲೆ ಅನೇಕ ಪ್ರಕಣಗಳಿದ್ದು ಯಾರಿಂದಲೂ ಏನು ಮಾಡಲು ಸಾದ್ಯವಾಗಿಲ್ಲ. ನಾನು ಇಂತಹ ಹಲವು ಪ್ರಕರಣಗಳನ್ನು ನೋಡಿದ್ದೇನೆ. ನೀನು ಏನು ಬೇಕಾದರು ಮಾಡು ನಾನು ಎದುರಿಸುತ್ತೇನೆ ಅಂತಾ ಹೇಳಿ ನನಗೆ ಹೊಡೆಯಲು ಬಂದಾಗ ಆತನಿಂದ ನಾನು ತಪ್ಪಿಸಿಕೊಂಡು ಪಂಚಾಯತಿಯಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ಆತ ಪುನಃ ನನ್ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಪಂಚಾಯತಿ ಒಳಗೆ ಇಷ್ಟೆಲ್ಲಾ ಹಾರಾಡುತ್ತಿದ್ದೀಯಲ್ಲಾ ನೀನು ಒಬ್ಬಳೇ ತಿರುಗಾಡುತ್ತಿಯಲ್ಲಾ, ನಿನ್ನನ್ನು ಯಾರು ಕಾಪಾಡುತ್ತಾರೆ ನಾನು ನೋಡುತ್ತೇನೆ. ನಿನ್ನನ್ನು ಇಷ್ಟಕ್ಕೆ ಸುಮ್ಮನೆ ಬಿಡುವದಿಲ್ಲಾ ನಿನ್ನನ್ನು ಮುಂದೊಂದು ದಿನ ಇದೇ ಪಂಚಾಯತ ಮುಂದೆ ಕೊಂದು ಹಾಕುತ್ತೇನೆ ಅಂತಾ ಜೀವ ಬೇದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.