• first
    second
    third
    previous arrow
    next arrow
  • ಗೋಡೆ ಕುಸಿದು ಮಹಿಳೆ ಮೃತ; 16 ತಾಸಿನಲ್ಲಿ 5ಲಕ್ಷ ರೂ.ಚೆಕ್ ವಿತರಿಸಿದ ಸಚಿವ ಹೆಬ್ಬಾರ್

    300x250 AD

    ಶಿರಸಿ: ಗುಡ್ನಾಪುರ ಗ್ರಾಮ ಪಂಚಾಯತ್ ಮುಂಡಿಗೆಹಳ್ಳಿಯಲ್ಲಿ ಮನೆಗೋಡೆ ಕುಸಿದು ಮೃತ ಪಟ್ಟ ವ್ಯಕ್ತಿ ಕುಟುಂಬಕ್ಕೆ ಕೇವಲ 16 ಗಂಟೆಯ ಅವಧಿಯಲ್ಲಿ 5 ಲಕ್ಷ ರೂ ಪರಿಹಾರ ಧನದ ಚೆಕ್‍ನ್ನು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ವಿತರಿಸಿದರು.
    ಜು.17 ರಂದು ಸಂಜೆ ಹೊತ್ತಿಗೆ ಮನೆ ಗೋಡೆ ಕುಸಿದು ಯಶೋಧ ಬಂಗಾರ ಗೌಡ ಮೃತಪಟ್ಟಿದ್ದು, ಅವರ ಮನೆಗೆ ಸಚಿವ ಹೆಬ್ಬಾರ್ ಶೀಘ್ರ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಎರಡು ಗಂಟೆಯಲ್ಲಿ ಶವ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಶವ ಹಸ್ತಾಂತರ ಮಾಡಿಸಿ 48 ಗಂಟೆಯೊಳಗೆ ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ನೀಡುವುದಾಗಿ ತಿಳಿಸಿದ್ದರು. ಅದರಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೇವಲ 16 ಗಂಟೆಯಲ್ಲಿ ಅಧಿಕಾರಿಗಳೊಂದಿಗೆ ಬಂದು ಚೆಕ್ ವಿತರಣೆ ಮಾಡಿದ್ದಾರೆ. ಸಚಿವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಶ್ಲಾಘನೆ ವ್ಯಕ್ತವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top