ಶಿರಸಿ: ತಾಲೂಕಿನ ಲಯನ್ಸ ಶಾಲಾ ವಿದ್ಯಾರ್ಥಿಗಳು ಶಾಲಾ ಗ್ರಂಥಾಲಯ ಸಂಘದ ಮೂಲಕ ಹೊರತರುತ್ತಿರುವ ಕ್ಯಾಂಪಸ್ ಗೋಡೆ ಬರಹದ ಮಾಸ ಪತ್ರಿಕೆಯನ್ನು ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷ , ಶಿರಸಿ ಲಯನ್ಸ್ ಕೋಶಾಧ್ಯಕ್ಷ ಎಂ.ಜೆ.ಎಫ್. ಲಯನ್ ಉದಯ ಸ್ವಾದಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಮಕ್ಕಳ ಸೃಜನಶೀಲ ಕೃತಿಗಳು, ಶಾಲೆಯ ಆಯಾ ತಿಂಗಳ ವಿಶೇಷ ಸಂಗತಿಗಳನ್ನು ಈ ಮಾಸ ಪತ್ರಿಕೆ ಒಳಗೊಂಡಿದೆ. ಶಾಲಾ ಗ್ರಂಥಾಲಯ ಮೇಲ್ವಿಚಾರಕರಾದ ರಾಘವೇಂದ್ರ ಹೊಸೂರು ನೇತ್ರತ್ವದಲ್ಲಿ ವಿದ್ಯಾರ್ಥಿಗಳ ಸಂಪಾದಕ ಮಂಡಳಿ ಈ ಮಾಸಪತ್ರಿಕೆ ಹೊರತರುತ್ತಿದೆ.
ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೊ.ಎನ್.ವಿ.ಜಿ.ಭಟ್, ಸದಸ್ಯರುಗಳಾದ ಲಯನ್ ಶ್ಯಾಮಸುಂದರ ಭಟ್, ಲಯನ್ ಕೆ.ಬಿ.ಲೋಕೇಶ ಹೆಗಡೆ, ಎಂ.ಜೆ.ಎಫ್ ಲಯನ್ ರಮಾ ಪಟವರ್ಧನ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮಕ್ಕಳ ಜೊತೆ ಶಿಕ್ಷಕ- ಶಿಕ್ಷಕೇತರ ವೃಂದ ಹಾಗೂ ಪಾಲಕ ಬಳಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.