ಮುಂಡಗೋಡ: ಹುಮನಾಬಾದ ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೋಳ್ಳುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರರ ಸಂಘದವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಶನಿವಾರ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ತಹಸೀಲ್ದಾರ್ ಪ್ರದೀಪ ಹಿರೇಮಠ ಅವರ ಮೇಲೆ ಶುಕ್ರವಾರ ಪ್ರತಿಭಟನೆಯ ನೆಪದಲ್ಲಿ ಹಲ್ಲೆ ನಡೆಸಿ ನಿಂದಿಸಿರುವುದನ್ನು ಕರ್ನಾಟಕ ರಾಜ್ಯ ನೌಕರರ ತಾಲೂಕು ಸಂಘ ತೀವೃವಾಗಿ ಖಂಡಿಸುತ್ತದೆ. ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೋಳ್ಳಬೇಕು ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನೌಕರರ ಮನೋಬಲ ಹೆಚ್ಚಿಸಲು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನೌಕರರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಸುಭಾಸ ಡೋರಿ, ಗೇಡ್ 2 ತಹಸಿಲ್ದಾರ್ ಜಿ.ಬಿ.ಭಟ್, ವೀಣಾ ರಾಠೋಡ, ಸಂಜು ಲಮಾಣಿ, ಶಂಭು ಪಾಟೀಲ, ಕರೂರ, ನಾಗರಾಜ ತಳವಾರ, ರಾಘವೇಂದ್ರ ಗಿರೇಡ್ಡಿ, ಶ್ರೀಕಾಂತ, ನವೀನ, ಶಿವರಾಜ ಸೂರಿನ್, ದಾಕ್ಷಾಯಣಿ ಬಾಡದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.