ಮುಂಡಗೋಡ: ಕಾಡಿನಿಂದ ಆಹಾರ ಅರಸಿ ಪಟ್ಟಣದ ಕಂಬಾರಗಟ್ಟಿ ಸನಿಹದಲ್ಲಿ ಬಂದ ಜಿಂಕೆಯೊಂದನ್ನು ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಂಡ ಜಿಂಕೆಯನ್ನು ಸಾರ್ವಜನಿಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಸಿದ ಘಟನೆ ನಡೆದಿದೆ.
ಕಾಡಿನಿಂದ ಆಹಾರ ಹುಡುಕುತ್ತಾ ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ಸನಿಹದಲ್ಲಿ ಜಿಂಕೆ ಬಂದಿದೆ. ಅದನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ಜಿಂಕೆಗೆ ಬಲವಾಗಿ ಕಚ್ಚಿ ಗಾಯಗೊಳಿಸಿವೆ. ಅದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬೀದಿ ನಾಯಿಗಳಿಂದ ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಒಪ್ಪಸಿದ್ದಾರೆ. ಗಾಯಗೊಂಡ ಜಿಂಕೆಯನ್ನು ತಾಲೂಕಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಂಕೆಯನ್ನು ಮತ್ತೆ ಸುರಕ್ಷಿತವಾಗಿ ಅರಣ್ಯಕ್ಕೆ ಬೀಡಲಾಯಿತು.