ಶಿರಸಿ: ಸ್ವತಂತ್ರ ಭಾರತದ ಅಮೃತಮೋಹೋತ್ಸವದ ಈ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು . ಡಿಜಿಟಲ್ ರೂಪಾಯಿಯನ್ನು ಪ್ರಸ್ತುತ ಪಡಿಸುವ ಮೂಲಕ ದೇಶದಲ್ಲಿ ಆರ್ಥಿಕ ಕ್ರಾಂತಿಗೆ ಪೂರಕವಾದಂತಹ ಜನಪರ ಬಜೆಟ್ ಪ್ರಸ್ತತಪಡಿಸಿದ ಕೇಂದ್ರ ವಿತ್ತ ಸಚಿವರಿಗೆ ಉತ್ತರ ಕನ್ನಡ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ವೆಂಕಟೇಶ್ ರಂಗಪ್ಪ ನಾಯಕ ಅಭಿನಂದನೆ ಸಲ್ಲಿಸಿದ್ದಾರೆ.
25000 ಕಿ. ಮೀ ಉದ್ದದ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ,60000ಕೋಟಿ ರೂಪಾಯಿ ಹಣವನ್ನು ನಲ್ ಸೆ ಜಲ್ ಉದ್ದೇಶಕ್ಕೆ ಇಟ್ಟಿರುವುದು,48000 ಕೋಟಿ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ವಸತಿ ಯೋಜನೆಗೆ ಇಟ್ಟಿರುವುದು ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಹೊಸ ಭಾಷ್ಯೆಯನ್ನೇ ಬರೆಯಲಿದೆ .ಇದು ಆತ್ಮನಿರ್ಭರತೆಯನ್ನು, ಪರಿಸರವನ್ನು, ಸರ್ವರಿಗೂ ಸಮಪಾಲು – ಸಮಬಾಳು ತತ್ವವನ್ನು ಗಮನದಲ್ಲಿ ಇಟ್ಟುಕೊಂಡ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.