ಮುಂಡಗೋಡ: ವ್ಯಕ್ತಿಯೊಬ್ಬ ಮನೆ ಖರೀದಿಸುವ ನೆಪದಲ್ಲಿ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಚೆಕ್ ನೀಡಿ ನಮಗೆ 38 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ತಟ್ಟಿಹಳ್ಳಿ ಗ್ರಾಮದ ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಶಾರದಾ ವಿನಾಯಕ ಗಾಂವಕರ ಎಂಬ ಮಹಿಳೆ ವಂಚನೆಗೊಳಗಾದ ಮಹಿಳೆಯಾಗಿದ್ದಾಳೆ. ಚಂದ್ರಶೇಖರ್ ಮಾರುತಿ ಹೊಸುರ ಎಂಬಾತ ವಂಚಿನೆ ಮಾಡಿದ ವ್ಯಕ್ತಿಯಾಗಿದ್ದಾನೆ. ಇತ ತಾಲೂಕಿನ ತಟ್ಟಿಹಳಿಯಲ್ಲಿರುವ ಶಾರದಾ ಗಾಂವಕರ್ ಎಂಬ ಮಹಿಳೆಯ ಮನೆ ಖರೀದಿಸುವುದಾಗಿ ನಂಬಿಸಿ ನವೆಂಬರ್ 17ರಂದು ಪಟ್ಟಣದ ಚಬ್ಬಿ ಆಸ್ಪತ್ರೆಯ ಹತ್ತಿರವಿರುವ ವಕೀಲರಾದ ನಾಗಭೂಷಣ ಹೆಗಡೆ ಎಂಬವರ ಕಚೇರಿಯಲ್ಲಿ ಕರಾರು ಪತ್ರ ಮಾಡಿಕೊಂಡು ತನ್ನ ಕೆನರಾ ಬ್ಯಾಂಕ ಖಾತೆಯಲ್ಲಿ ಹಣ ಇಲ್ಲದಿದ್ದರು 38 ಲಕ್ಷ ರೂಪಾಯಿ ಚೆಕ್ ನೀಡಿ ಹಣವನ್ನು ಕೊಡದೆ ಶಾರದಾ ಹಾಗೂ ಅವರ ಮಗಳ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿದ್ದಾನೆ.
ಅಷ್ಟೇ ಅಲ್ಲದೇ ಅವರ ಮನೆಯ ಆವರಣದ ಗೋಡೆ ಹಾಗೂ ಗೇಟ್‍ಗಳನ್ನು ಜೆಸಿಬಿ ಮೂಲಕ ಮುರಿದು ಮನೆಯ ಹಿತ್ತಲಿನಲ್ಲಿರುವ ಹಣ್ಣಿನ ಮರಗಳು, ಅನೇಕ ಗಿಡ ಮರಗಳನ್ನು ಕಡಿದು ಹಾಕಿದ್ದಲ್ಲದೆ ಅಲ್ಲಿರುವ ವಿವಿಧ ಜಾತಿಯ ಹೂವಿನ ಹಾಗೂ ಔಷಧೀಯ ಸಸ್ಯಗಳನ್ನು ತೆಗೆದು ಹಾಕಿ ಜೆಸಿಬಿಯಿಂದ ನೆಲಸಮ ಮಾಡಿ ಮನೆಯ ಕ್ರಯ ವ್ಯವಹಾರದ 38 ಲಕ್ಷ ರೂಪಾಯಿ ಹಣವನ್ನು ಕೊಡದೆ ಮೊಸ ಮಾಡಿದ್ದಲ್ಲದೆ ಮುಂಡಗೋಡದ ಹಲವರಿಗೆ ವಂಚನೆ ಮಾಡಿದ್ದಾನೆ ಎಂದು ಶಾರದಾ ಗಾಂವಕರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.