ಮುಂಡಗೋಡ: ಪಟ್ಟಣದ ಹೊಸಓಣಿಗೆ ಆಗಮಿಸಿದ್ದ ಅಳಿಲನ್ನು ಹಿಡಿದು ಅರಣ್ಯ ಇಲಾಖೆಯ ಉದ್ಯಾನವನದಲ್ಲಿ ಬಿಟ್ಟ ಘಟನೆ ಭಾನುವಾರ ನಡೆಯಿತು.
ಪಟ್ಟಣದ ಹೊಸಓಣಿಯ ಚಂದ್ರು ಗುಡಿಮನಿ ಎಂಬವರ ಮನೆಯ ಹತ್ತಿರ ಬೆಳಗ್ಗೆ ಅಳಿಲು ಪ್ರತ್ಯಕ್ಷವಾಗಿತ್ತು ಇದನ್ನು ಕಂಡ ಮನೆಯವರು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದರು. ಆಗ ಅಳಿಲನ್ನು ವೀಕ್ಷಣೆಗೆ ಜನ ಸೇರಿದ್ದು ನಂತರ ಸಾರ್ವಜನಿಕರು ಅರಣ್ಯ ಇಲಾಖೆಗೆ ಕರೆ ಮಾಡಿ ಅಳಿಲು ಬಂದಿರುವ ವಿಷಯ ತಿಳಿಸಿದರು. ಈ ವೇಳೆ ಪಟ್ಟಣದ ಉಪವಲಯ ಅರಣ್ಯಾಧಿಕಾರಿ ಅರುಣ ಕಾಶಿ ಸ್ಥಳಕ್ಕಾಗಮಿಸಿ ಸ್ಥಳಿಯರ ಸಹಾಯದೊಂದಿಗೆ ಅಳಿಲನ್ನು ಹಿಡಿದುಕೊಂಡು ನಂತರ ಅರಣ್ಯ ಇಲಾಖೆಯ ಬಳಿಯಿರುವ ಉದ್ಯಾನವನದಲ್ಲಿ ಬಿಟ್ಟರು. ಇದು ಕಂದು ಬಣ್ಣದ ಅಳಿಲಾಗಿದ್ದು, ಅರಣ್ಯದಲ್ಲಿ ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುತ್ತಾ ಹಣ್ಣು, ಏಲೆ, ಚಿಗುರು ತಿನ್ನುತ್ತಾ ಜೀವಿಸುತ್ತದೆ. ಅಳಿಲು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ ಅಳಿಲು ಸಂತತಿ ನಶಿಸುತ್ತಿರುವುದರಿಂದ ಹಿನ್ನಲೆಯಲ್ಲಿ ಅದರ ಉಳುವಿಗಾಗಿ ಕೆಂದ್ರ ಸರಕಾರ ಅಳಿಲು ಬೇಟೆಯಾಡುವುದನ್ನು ನಿಷೇಧಿಸಿದೆ. ಮುಂಡಗೋಡ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಅಳಿಲುಗಳು ತಾಲೂಕಿನ ಕೆಲವಡೆ ಕಾಣ ಸಿಗುತ್ತವೆ ಎಂದು ಉಪವಲಯ ಅರಣ್ಯಾಧಿಕಾರಿ ಅರುಣ ಕಾಶಿ ತಿಳಿಸಿದ್ದಾರೆ.