ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸ್ವರ್ಣವಲ್ಲೀ ಇವರ ಆಶ್ರಯದಲ್ಲಿ ವೇದ ವಾಙ್ಮಯದಲ್ಲಿ ಹಿಮಾಲಯ (ಪವಿತ್ರ ಕೈಲಾಸ ಪರ್ವತ ಹಾಗೂ ಮಾನಸ ಸರೋವರಗಳಿಗೆ ಪರೋಕ್ಷ ಯಾತ್ರೆ) ಕುರಿತ ದ್ರಶ್ಯ-ಶ್ರಾವ್ಯ ನಿರೂಪಣೆ ಕಾರ್ಯಕ್ರಮ ಫೆ.2 ಬುಧವಾರ ಸಂಜೆ 6ರಿಂದ 8 ಗಂಟೆವರೆಗೆ ಅಂಬಾ ಭವನ, ಶ್ರೀ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ.
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಲಿದ್ದು, ಭಾರತ ಸರಕಾರ ಭೂತಪೂರ್ವ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ ಐ.ಇ.ಎಸ್ ನಿರೂಪಣೆ ಮಾಡಲಿದ್ದಾರೆ ಎಂದು ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ನಿರ್ವಾಹಕ ಎಸ್.ಎನ್.ಗಾಂವಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.