ಮುಂಡಗೋಡ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿದೆ. ಕಸ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದುಕೊಂಡಿದ್ದು ಇದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಕೆಂಗಣ್ಣಿಗೆ ಗುರಿಯಾಗಿದ್ದು ವಾಹನ ಸವಾರರು ಹಾಗು ಸಾರ್ವಜನಿಕರು ಪಟ್ಟಣ ಪಂಚಾಯತಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆಗಳಲ್ಲಿ ಗುಂಡಿಗಳ ಸರಮಾಲೆ: ಪಟ್ಟಣದ ನೆಹರು ನಗರದ ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆ ಸೇರಿದಂತೆ ವಿವಿಧವ ವಾರ್ಡಗಳಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಓಡಾಡಲು ಆಗದೆ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಿದ್ದು ಇದರಿಂದ ಸಾರ್ವಜನಿಕರ ನಿರ್ಭಯವಾಗಿ ಓಡಾಡದೆ ವಾಹನ ಸವಾರರು ಹಾಗೂ ಪಾದಾಚಾರಿಗಳು ಅಧಿಕಾರಿಗಳ ವಾರ್ಡ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಎಲ್ಲವು ಸರಿಯಾಗಿದೆ ಎನ್ನುವ ಇವರಿಗೆ ಈ ಸಮಸ್ಯೆ ಕಾಣುತ್ತಿಲ್ಲವೆ ಎಂದು ಹಿಡಿಶಾಪ ಹಾಕುತ್ತಿರುವುದು ಕಂಡು ಬರುತ್ತಿದೆ.
ಕಸ ವಿಲೇವಾರಿ ಆಗದೆ ರಸ್ತೆಗಳಲ್ಲಿ ಕಸದ ರಾಶಿ ರಾಶಿ:ಮೊದಲು ಮನೆಯ ಕಸವನ್ನು ಪ್ರತಿದಿನವು ಪಟ್ಟಣ ಪಂಚಾಯತ್ ವಾಹನಗಳು ಬಂದು ಒಯುತ್ತಿದ್ದವು ಆದರೆ ಕೆಲವು ದಿನಗಳಿಂದ ಕಸ ತುಂಬುವ ವಾಹನಗಳು ಬಡಾವಣೆಗಳ ಮನೆಗಳ ಕಸ ಒಯುವುದನ್ನೆ ಬಿಟ್ಟಿವೆ ಆದರಿಂದ ಸಾರ್ವಜನಿಕರು ತಮ್ಮ ಮನೆಯ ಕಸವನ್ನು ತಂದು ಮನೆಯ ಬಾಗಿಲಿನ ಮುಂದಿರುವ ಚರಂಡಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ತಂದು ಸುರುವುತ್ತಿದ್ದಾರೆ. ಇದರಿಂದ ಸುಂದರವಾದ ಪಟ್ಟಣ ಕಸದ ರಾಶಿಯಿಂದ ತುಂಬಿದೆ. ಸ್ವಚ್ಚ ಭಾರತದ ಕನಸು ಇಲ್ಲಿ ಸಂಪೂರ್ಣ ವಿಫಲವಾಗಿರುವುದು ಕಂಡು ಬರುತ್ತಿದೆ.
ಎಲ್ಲೆಂದರಲ್ಲಿ ತುಂಬಿದ ಚರಂಡಿಗಳು: ಆನಂದ ನಗರ, ಸುಭಾಷ್ ನಗರ, ಗಾಂದಿ ನಗರ,ಸೇರಿದಂತೆ ಸಾರ್ವಜನಿಕರು ದಿನದಿಂದ ದಿನಕ್ಕೆ ಕಸವನ್ನು ತಂದು ಚರಂಡಿಗಳಲ್ಲಿ ಸುರಿಯುತ್ತಿದ್ದಾರೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಚರಂಡಿಗಳ ಸ್ವಚ್ಚತೆ ಮಾಡದೆ ಚರಂಡಿಯಲ್ಲಿ ನೀರು ತುಂಬಿ ಗಬ್ಬು ವಾಸನೆ ಬರುತ್ತಿದ್ದು ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಹಂದಿಗಳು ಚರಂಡಿಯಲ್ಲಿ ಹೊರಳಾಡಿ ರಾಡಿ ಎಬ್ಬಿಸಿ ಕೊಳಚೆ ನೀರಲ್ಲಿ ಹೊರಳಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದೆ ನಮಗು ಇದಕ್ಕೂ ಸಂಬಂಧವೇ ಇಲ್ಲಾ ಎನ್ನುವ ಹಾಗೆ ಉಳಿದಿರುವುದು ಎಷ್ಟು ಸರಿ ?
ತಲೆ ಕೆಡಸಿಕೊಳ್ಳದ ಬಡಾವಣೆ ಸದಸ್ಯರು ಹಾಗೂ ಅಧಿಕಾರಗಳು: ಚುನಾವಣೆಯಲ್ಲಿ ಕೈಕಾಲು ಬಿದ್ದು ಮತ ಕೇಳಿದವರು ಈಗ ನಮ್ಮ ಸಮಸ್ಯೆಗಳನ್ನು ಅರಿತುಕೊಂಡ ಸರಿ ಪಡಿಸಬೇಕು ಅದನ್ನು ಬಿಟ್ಟು ಜನರಿಗೆ ಎನು ತೊಂದರೆ ಆಗಿದೆ ಎಂದು ಕೇಳುವರಿಲ್ಲಾ ಅಧಿಕಾರಿಗಳು ಎಲ್ಲವು ಸರಿ ಇದೆ ಎನ್ನುವ ಮೊದಲು ಬಡಾವಣೆಗಳಲ್ಲಿ ಎನಾಗಿದೆ ಎಂದು ನೋಡಬೇಕಾಗಿದೆ ಎಂದು ಸ್ಥಳಿಯ ನಿವಾಸಿ ಬಾಬಾ ಶಿರಾಲಿ ಹೇಳಿದರು.ಸಾಂಕ್ರಾಮಿಕ ಕಾಯಿಲೆ ಹರಡುವ ಬೀತಿ: ಚರಂಡಿಗಳಲ್ಲಿ ಕಸ ತುಂಬಿ ಗಬ್ಬು ನಾರುತ್ತಿದೆ. ಅದರಲ್ಲಿ ಹಂದಿಗಳು ಹೊರಳಾಡುತ್ತಿವೆ. ಅದರಿಂದ ನಮ್ಮ ಬಡವಾಣೆಯಲ್ಲಿ ಸೊಳ್ಳೆ ಹಾಗೂ ಹಂದಿಗಳ ವಾಸಸ್ಥಾನವಾಗಿದೆ ಇದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ ಕೂಡಲೇ ಅಧಿಕಾರಿಗಳು ಎಚ್ಚತ್ತುಕೊಂಡು ಸಮಸ್ಯೆ ಬಗೆ ಹರಿಸಬೇಕಾಗಿದೆ ಎಂದು ಮಹಮ್ಮದ್ ಗೌಸ್ ಇಟ್ಲಾಪುರ ಹೇಳಿದರು.