ಭಟ್ಕಳ: ಬೈಕ್ ಹಾಗೂ ಎಕ್ಟಿವ್ ಹೊಂಡಾ ಬೈಕ್’ಗಳ ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ತಾಲೂಕಿನ ಬೆಂಗ್ರೆ ಸೋಮಯ್ಯನಮನೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ಕೈಕಿಣಿ ಗ್ರಾಪಂ ಕೊನಕಾರ ನಿವಾಸಿ ಮಾಸ್ತಿ ಶಂಕರ ದೇವಡಿಗ (48) ಮೃತ ಮಹಿಳೆಯಾಗಿದ್ದಾಳೆ. ಎಕ್ಟಿವ್ ಹೊಂಡಾ ಚಲಾಯಿಸುತ್ತಿದ್ದ ಈಕೆಯ ಪತಿ ಶಂಕರ ದೇವಡಿಗ, ಬೈಕ್‍ನಲ್ಲಿದ್ದ ಹೊನ್ನಾವರದ ನಿವಾಸಿಗಳಾದ ಜಸ್ಮಿತ್ ಹಾಗೂ ಜೋತ್ಪಾಗಾಯಗೊಂಡವರಾಗಿದ್ದಾರೆ. ಶಂಕರ ದೇವಾಡಿಗರಿಗೆ ಶಿರಾಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಜಸ್ಮಿತ್ ಹಾಗೂ ಜೋತ್ಸಾರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಎಸ್‍ಐ ರವೀಂದ್ರ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.